heart attack: ರಾಜ್ಯದಲ್ಲಿ ಪ್ರತಿವರ್ಷ 96,150 ಮಂದಿ ಹೃದಯಾಘಾತಕ್ಕೆ ಬಲಿ; ಹೃದಯ ಆರೋಗ್ಯವಾಗಿರಬೇಕಾ? ಹೀಗೆ ಮಾಡಿ

heart health: ರಾಜ್ಯದ ಜನರು ಗಮನಹರಿಸಬೇಕಾದ ಆತಂಕಕಾರಿ ಸುದ್ದಿಯೊಂದನ್ನು ರಾಜ್ಯ ಆರೋಗ್ಯ ಇಲಾಖೆ ನೀಡಿದ್ದು, ಕರ್ನಾಟಕದಲ್ಲಿ ಪ್ರತಿವರ್ಷ ಅಂದಾಜು 96,150 ರೋಗಿಗಳು ತೀವ್ರ ಹೃದಯಾಘಾತದಿಂದ ಹಠಾತ್‌ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ:…

heart attack

heart health: ರಾಜ್ಯದ ಜನರು ಗಮನಹರಿಸಬೇಕಾದ ಆತಂಕಕಾರಿ ಸುದ್ದಿಯೊಂದನ್ನು ರಾಜ್ಯ ಆರೋಗ್ಯ ಇಲಾಖೆ ನೀಡಿದ್ದು, ಕರ್ನಾಟಕದಲ್ಲಿ ಪ್ರತಿವರ್ಷ ಅಂದಾಜು 96,150 ರೋಗಿಗಳು ತೀವ್ರ ಹೃದಯಾಘಾತದಿಂದ ಹಠಾತ್‌ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆಯ ವಯಸ್ಸು 16 ವರ್ಷಕ್ಕೆ..!?

ಹೌದು, ಜಾಗತಿಕ ಸರಾಸರಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಯ ಪ್ರಮಾಣ ಹೆಚ್ಚಿದೆ. ವಿಶ್ವದಲ್ಲಿ ಹೃದಯ ಕಾಯಿಲೆಗೆ ಬಲಿಯಾಗುವವರ ಪ್ರಮಾಣ 1,00,000ಕ್ಕೆ 235 ಇದ್ದರೆ, ಭಾರತದಲ್ಲಿ ಇದು ಸ್ವಲ್ಪ ಹೆಚ್ಚಾಗಿದೆ. 1,00,000ಕ್ಕೆ 272 ಇದೆ.

Vijayaprabha Mobile App free

ಮೊಬೈಲ್‌ನಿಂದ ಹೃದಯಕ್ಕೆ ಭಾರೀ ಅಪಾಯ

ಮೊಬೈಲ್‌ ಬಳಕೆಯಿಂದ ಹೃದಯಕ್ಕೆ ಭಾರೀ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದು, ಅತಿಯಾದ ಮೊಬೈಲ್‌ ಬಳಕೆ ವ್ಯಕ್ತಿಯನ್ನು ಜಡತ್ವಕ್ಕೆ ತಳ್ಳುತ್ತದೆ. ದೈಹಿಕ ಚಟುವಟಿಕೆಗಳು ನಿಂತುಹೋಗಿ ರಕ್ತದೊತ್ತಡ, ಮಧುಮೇಹ ಹೆಚ್ಚಾಗಿ ಹೃದಯದ ಕಾಯಿಲೆಗೆ ಕಾರಣವಾಗುತ್ತದೆ.

ಇದನ್ನೂ ಓದಿ:  ಇಂದೇ ಕೊನೆ ದಿನ, ಅಕ್ಟೋಬರ್ 1 ರಿಂದ ಹೊಸ ನಿಯಮಗಳು; ಅಕ್ಟೋಬರ್‌ನಲ್ಲಿ ಬರುವ ಬದಲಾವಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಹೌದು, ಪದೇ ಪದೇ ಮೊಬೈಲ್‌ ನೋಡುವುದರಿಂದ ಒತ್ತಡ ಹೆಚ್ಚಿ ಹೃದಯದ ಆರೋಗ್ಯ ಕೆಡುತ್ತದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಹೊರಸೂಸುವ ಎಲೆಕ್ಟ್ರೋಮ್ಯಾಗ್ನಟಿಕ್‌ ರೇಡಿಯೇಷನ್‌ ಮಿದುಳಿಗೆ ಹಾನಿ ಮಾಡಿ ಆರೋಗ್ಯ ಕೆಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಹೃದಯ ಆರೋಗ್ಯವಾಗಿರಬೇಕಾ? ಹೀಗೆ ಮಾಡಿ

ಮದ್ಯ, ಧೂಮಪಾನ ಇತರೆ ಕೆಟ್ಟ ಅಭ್ಯಾಸಗಳು ಹಾರ್ಟ್‌ ಅಟ್ಯಾಕ್‌ಗೆ ಕಾರಣ ಎನ್ನುತ್ತಾರೆ ವೈದ್ಯರು. ಹೀಗಾಗಿ ಈ ಅಭ್ಯಾಸಗಳನ್ನು ಬಿಡುವುದು ಒಳ್ಳೆಯದು. ಹೃದಯ ಖಾಯಿಲೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ.

  • ಹೆಚ್ಚು ಉಪ್ಪು ಸೇವಿಸಬೇಡಿ
  • ಪ್ಯಾಕ್ಡ್‌, ಸಂಸ್ಕರಿಸಿದ ಆಹಾರ ತಿನ್ನಬೇಡಿ
  • ಫ್ರೆಶ್ ಆಗಿ ತಯಾರಾದ ಆಹಾರ ಸೇವಿಸಿ ಹಿತ-ಮಿತವಾಗಿ ಆಹಾರ ಸೇವಿಸಿ
  • ಕೊಬ್ಬಿನ ಅಂಶ ಹೆಚ್ಚಿಸುವ ಪದಾರ್ಥಗಳಿಂದ ದೂರವಿರಿ
  • ನಾರಿನ ಅಂಶ ಇರುವ ಆಹಾರಗಳನ್ನು ತಿನ್ನಿರಿ
  • ಯೋಗ-ವ್ಯಾಯಾಮದ ಅಭ್ಯಾಸವಿರಲಿ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.