PM Kisan: ರೈತರಿಗೆ ಶೀಘ್ರವೇ ಸಿಹಿಸುದ್ದಿ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು,ಖಾತೆಗಳಿಗೆ ಹಣ ಜಮಾ ಮಾಡಲು ಸಿದ್ಧವಾಗುತ್ತಿದೆ. ಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಹಲವಾರು ವರದಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 15 ನೇ ಕಂತು ಬಿಡುಗಡೆಯ ಸಕಾರಾತ್ಮಕ ಅಂಶಗಳನ್ನು ಬಹಿರಂಗಪಡಿಸಿವೆ. ಹೌದು, ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ, ಪಿಎಂ ಕಿಸಾನ್ ಯೋಜನೆಯ ಮೂಲಕ ದಾನಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತಿದೆ. ತಲಾ ರೂ.2,000ರಂತೆ ಮೂರು ಕಂತುಗಳಲ್ಲಿ ವಾರ್ಷಿಕ ರೂ. 6,000 ಹಣ ಮಾಡಲಾಗುತ್ತಿದೆ.
ಇದನ್ನೂ ಓದಿ: ಇಂದಿನ ಕರ್ನಾಟಕ ಬಂದ್ ಬಗ್ಗೆ ಸಂಪೂರ್ಣ ಮಾಹಿತಿ; ಇಂದು ಏನಿರುತ್ತೆ? ಏನಿರಲ್ಲ?
ಕೇಂದ್ರ ಸರ್ಕಾರ ಈಗಾಗಲೇ ರೈತರ ಬ್ಯಾಂಕ್ ಖಾತೆಗೆ 14 ಕಂತುಗಳ ಹಣವನ್ನು ಜಮಾ ಮಾಡಿದೆ. ಈಗ 15ನೇ ಕಂತು ಬಾಕಿ ಇದ್ದು, ಈ ಮೊತ್ತವು ನವೆಂಬರ್ ತಿಂಗಳಿನಲ್ಲಿಯೇ ರೈತರ ಬ್ಯಾಂಕ್ ಖಾತೆಗಳಿಗೆ ತಲುಪಬಹುದು ಎನ್ನಲಾಗಿದ್ದು, ಅನೇಕ ವರದಿಗಳು ಇದನ್ನು ಬಹಿರಂಗಪಡಿಸಿವೆ. ಆದರೆ, ಕೇಂದ್ರ ಸರ್ಕಾರ ಅಧಿಕೃತವಾಗಿ 15ನೇ ಕಂತಿನ ಹಣ ಘೋಷಣೆ ಮಾಡಿಲ್ಲ. ಆದರೆ ಖಾರಿಫ್ ಬೆಳೆ ಬೆಳೆದು ಹಣದ ನೆರವಿಗಾಗಿ ರೈತರು ಕಾಯುತ್ತಿದ್ದು, ಈಗ ರೈತರ ಖಾತೆಗೆ ಹಣ ಬಂದರೆ ಅವರಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಬಹುದು.
PM Kisan: ಇದನ್ನು ಮಾಡಿಸದಿದ್ದರೆ ನಿಮ್ಮ ಖಾತೆಗೆ 6000 ರೂ ಬರಲ್ಲ!
ರೈತರ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ಈ 15 ನೇ ಕಂತು ಪಡೆಯಲು ಫಲಾನಿಭವಿಗಳು ಈ ಒಂದು ಕೆಲಸವನ್ನು ಪೂರ್ಣಗೊಳಿಸಬೇಕು. ಹೌದು, ಸೆಪ್ಟೆಂಬರ್ 30ರೊಳಗೆ ಐಕೆವೈಸಿ ಮಾಡದಿದ್ದರೆ ಬ್ಯಾಂಕ್ ಖಾತೆಗಳಿಗೆ ಹಣ ತಲುಪದೇ ಇರಬಹುದು ಎಂಬ ವಾದಗಳು ಕೇಳಿ ಬರುತ್ತಿವೆ. ಹಾಗಾಗಿ ಸೆ.30ರೊಳಗೆ ನಿಮ್ಮ ಬ್ಯಾಂಕ್ಗೆ ತೆರಳಿ ಕೆವೈಸಿ ಮಾಡಿಸಿ. ಅಥವಾ PM ಕಿಸಾನ್ ವೆಬ್‌ಸೈಟ್/ ಅಪ್ಲಿಕೇಶನ್ ಮೂಲಕ KYC ಪ್ರಕ್ರಿಯೆ ಪೂರ್ಣಗೊಳಿಸಕೊಳ್ಳಬಹುದಾಗಿದೆ.
ಇದನ್ನೂ ಓದಿ: ಇಂದು ಭಾದ್ರಪದ ಪೌರ್ಣಮಿಯಂದು ವೃಷಭ, ಧನು, ಕುಂಭ ಸೇರಿದಂತೆ ಈ 3 ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ..!
PM Kisan: ಪಿಎಂ ಕಿಸಾನ್ ಪಟ್ಟಿಯಲ್ಲಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
- ಮೊದಲು ನೀವು ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಲು https://pmkisan.gov.in// ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- ಮುಖಪುಟದಲ್ಲಿ ರೈತರ ಕಾರ್ನರ್‌ಗೆ ಹೋಗಿ.
- ಅದರ ನಂತರ ತೆರೆಯುವ ಪುಟದಲ್ಲಿ ನೀವು ಫಲಾನುಭವಿ ಸ್ಥಿತಿ ಆಯ್ಕೆಯನ್ನು ಆರಿಸಬೇಕಾಗುತ್ತದೆ.
- ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್, ಗ್ರಾಮದ ಹೆಸರು ಮುಂತಾದ ಸಂಪೂರ್ಣ ವಿವರಗಳನ್ನು ಒದಗಿಸಿ.
- ಅದರ ನಂತರ get report ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಫಲಾನುಭವಿಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.
- ಪರದೆಯ ಮೇಲೆ ಪ್ರದರ್ಶಿಸಲಾದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ನೀವು ಕಂಡುಹಿಡಿಯಬಹುದು.
- ಹೆಸರಿಲ್ಲದಿದ್ದರೆ, ತಕ್ಷಣವೇ ಸಂಬಂಧಿಸಿದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಮತ್ತು ಪಿಎಂ ಕಿಸಾನ್ ಸಹಾಯಕ್ಕಾಗಿ ಮತ್ತೊಮ್ಮೆ ನೋಂದಾಯಿಸಿ.
- ಅಥವಾ ಆನ್‌ಲೈನ್‌ನಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು. ಅದಕ್ಕಾಗಿ ಪಿಎಂ ಕಿಸಾನ್ ವೆಬ್‌ಸೈಟ್‌ಗೂ ಹೋಗಿ.
ಇದನ್ನೂ ಓದಿ: 93,362 ರೇಷನ್ ಕಾರ್ಡ್ ಅರ್ಜಿಗಳು ತಿರಸ್ಕೃತ; ಅರ್ಜಿಗಳ ತಿರಸ್ಕಾರಕ್ಕೆ ಕಾರಣವೇನು?
ಗಮನಿಸಿ ‘FRUITS’ ನಲ್ಲಿ ನೋಂದಣಿ ಕಡ್ಡಾಯ!
ಇನ್ನು, ಎಲ್ಲಾ ವರ್ಗದ ರೈತರು ಕೃಷಿಗೆ ಸಂಬಂಧಿಸಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಬೇಕಾದರೆ ‘FRUITS’ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದ್ದು, ಇಲ್ಲಿ ನೋಂದಣಿ ಬಳಿಕ FID ನಂಬರ್ ದೊರೆಯುತ್ತಿದೆ. ಆಧಾರ್ ನಂಬರ್‌ನಂತೆಯೇ FID ನಂಬರ್ ರೈತನಿಗೆ ಸಿಗುತ್ತದೆ. ರೈತರು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳಲ್ಲಿ ನೋಂದಾಯಿಸಿ FID ನಂಬರ್ ಪಡೆಯಿರಿ. ಹೆಚ್ಚಿನ ಮಾಹಿತಿಗೆ https://fruits.karnataka.gov.in/ ಇಲ್ಲಿ ಕ್ಲಿಕ್ಕಿಸಿ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |