Karnataka bandh: ಇಂದು ಕರ್ನಾಟಕ ಬಂದ್
- ಬಂದ್ ಯಾರೆಲ್ಲ ಬೆಂಬಲ ಕೊಟ್ಟಿದ್ದಾರೆ?
- ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ
- ಇಂದಿನ ಬಂದ್ ಹೇಗಿರುತ್ತೆ?
- ಪರೀಕ್ಷೆ ಮುಂದೂಡಿಕೆ
- ಇಂದು ಏನಿರುತ್ತೆ? ಏನಿರಲ್ಲ?
Karnataka bandh: ಸಿಎಡಬ್ಲ್ಯೂ ಆರ್ ಸಿ ಆದೇಶದ ಪ್ರಕಾರ ತಮಿಳುನಾಡಿಗೆ ಪ್ರತಿ ದಿನ ಮೂರು ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯ ಮತ್ತೊಂದು ರೂಪವೇ ಕರ್ನಾಟಕ ಬಂದ್.
ಇದನ್ನೂ ಓದಿ: ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಬಂದ್; ಏನಿರುತ್ತೆ, ಏನಿರಲ್ಲ?
ಸೆಪ್ಟೆಂಬರ್ 26ರಂದು ಇದೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ 250ಕ್ಕೂ ಅಧಿಕ ರೈತಪರ ಮತ್ತು ಕನ್ನಡಪರ ಸಂಘಟನೆಗಳ ವತಿಯಿಂದ “ಬೆಂಗಳೂರು ಬಂದ್” ನಡೆಸಲಾಯಿತು. ತಮಿಳುನಾಡು ಕೇಳಿದಷ್ಟು ನೀರನ್ನು ಬಿಡಲು ನಮ್ಮ ಜಲಾಶಯಗಳಲ್ಲಿ ನೀರೇ ಇಲ್ಲ, ಇನ್ನು ಬಿಡುವ ಮಾತೆಲ್ಲಿ? ಅಂತಾ ಸರ್ಕಾರ ಹೇಳುತ್ತಲೇ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಕ್ಕೆ ಮಣಿದು ದಿನವೊಂದಕ್ಕೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುತ್ತ ಬಂದಿದೆ.
ಇದನ್ನು ವಿರೋಧಿಸುವ ರೈತ ನಾಯಕರು, ಕನ್ನಡಪರ ಹೋರಾಟಗಾರರು ಸೇರಿಕೊಂಡು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ “ಕರ್ನಾಟಕ ಬಂದ್’ ನಡಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದಿನ ಬಂದ್ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳನ್ನು ಒಳಗೊಂಡಿದ್ದು, ಶಾಂತಿಯುತವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಇಂದು ಭಾದ್ರಪದ ಪೌರ್ಣಮಿಯಂದು ವೃಷಭ, ಧನು, ಕುಂಭ ಸೇರಿದಂತೆ ಈ 3 ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ..!
Karnataka bandh: ಬಂದ್ ಯಾರೆಲ್ಲ ಬೆಂಬಲ ಕೊಟ್ಟಿದ್ದಾರೆ?
ಇತ್ರೀಚಿಗೆ ತಾನೆ ಬೆಂಗಳೂರು ಬಂದ್ ಅನ್ನು ಯಶಸ್ವಿಯಾಗಿ ನಡೆಸಿದ್ದು, ಈಗ ಮತ್ತೊಂದು ಬಂದ್ ನ ಅಗತ್ಯವಿತ್ತೆ? ಎಂಬ ಉದ್ಭವಿಸಿರುವ ನಡುವೆಯೇ ಇಂದು ಕರ್ನಾಟ ಬಂದ್ ಗೆ ಬೆಂಗಳೂರು ಸೇರಿದಂತೆ ರಾಜ್ಯದ ನೂರಕ್ಕೂ ಅಧಿಕ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಪ್ರವೀಣ್ ಶೆಟ್ಟಿ ಕರವೇ ಬಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಆಟೋ, ಓಲಾ, ಊಬರ್ ನಂಥ ಖಾಸಗಿ ಸಾರಿಗೆ ಸಂಸ್ಥೆಗಳು ಶುಕ್ರವಾರ ಕರ್ನಾಟಕ ಬಂದ್ ಗೆ ಒಕೆ ಅಂದಿವೆ.
ಇದನ್ನೂ ಓದಿ:93,362 ರೇಷನ್ ಕಾರ್ಡ್ ಅರ್ಜಿಗಳು ತಿರಸ್ಕೃತ; ಅರ್ಜಿಗಳ ತಿರಸ್ಕಾರಕ್ಕೆ ಕಾರಣವೇನು?
Karnataka bandh: ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಘೋಷಣೆ ಮಾಡಿದೆ. ಬೆಳಿಗ್ಗೆ 10 ಗಂಟೆಗೆ ಶಿವ ರಾಜಕುಮಾರ್ ನೇತೃತ್ವದಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶ್ರೀಮುರುಳಿ, ಧ್ರುವ ಸರ್ಜಾ ಸೇರಿದಂತೆ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಇನ್ನು, ಇಂದು ಚಿತ್ರೀಕರಣ ಹಾಗೂ ಚಿತ್ರ ಪ್ರದರ್ಶನಗಳನ್ನು ಸ್ಥಗಿತಗೊಳಿಸಲಾಗಿದ್ದು, ಸಂಜೆ ಬಳಿಕ ಎಲ್ಲವೂ ಸುಗಮವಾಗಲಿದೆ.
ಇದನ್ನೂ ಓದಿ: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಹೀಗೆ ಮಾಡುವುದು ಒಳ್ಳೆಯದು, ಒಮ್ಮೆ ಚೆಕ್ ಮಾಡಿ
ಇಂದಿನ ಬಂದ್ ಹೇಗಿರುತ್ತೆ?
ಬಂದ್ ಗೆ ಕರೆ ಕೊಟ್ಟಿರುವ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ರೋಡಿಗಿಳಿದು ರ್ಯಾಲಿ ಮಾಡುವರು. ವಾಹನಗಳ ಓಡಾಟದ ಮೇಲೆ ಕೆಂಗಣ್ಣು ಬೀರಬಹುದು. ಕಾವೇರಿ ನೀರಿಗಾಗಿ ಧರಣಿ ಇತ್ಯಾದಿ ಮಾಡಬಹುದು. ತಮ್ಮ ತಮ್ಮ ಸಂಘಟನೆಗಳ ಬಾವುಟ, ಭಿತ್ತಿಚಿತ್ರಗಳನ್ನು ಹಿಡಿದು ಜನ ಜಾಗೃತಿ ಮೂಡಿಸಲು ಯತ್ನಿಸಬಹುದು. ನಾಳಿನ ಬಂದದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಉಬ್ಬಿರುವ ರಕ್ತನಾಳಗಳನ್ನು ತೊಡೆದುಹಾಕಲು, ರಕ್ತದ ಹರಿವನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗಗಳು
ಇಂದು ಏನಿರುತ್ತೆ?
- ಔಷಧಾಲಯಗಳು
- ಆಸ್ಪತ್ರೆಗಳು
- ಹಾಲು
- ತರಕಾರಿ
- ದಿನಸಿ ಅಂಗಡಿಗಳು
- ಆಂಬುಲೆನ್ಸ್ ಸೇವೆ
- ಅಂಚೆ ಕಚೇರಿ
- ಬ್ಯಾಂಕ್ ವಹಿವಾಟು
- ಮೆಟ್ರೋ ಸೇವೆ
ಏನಿರಲ್ಲ?
- ಶಾಲೆ- ಕಾಲೇಜುಗಳು
- ಆಟೋ, ಕ್ಯಾಬ್, ಓಲಾ, ಉಬರ್ ಖಾಸಗಿ ಬಸ್ಗಳು ರಸ್ತೆಗಿಳಿಯಲ್ಲ
- ಹೊಟೇಲ್
- ಮಾಲ್ ಗಳು
- ಸೂಪರ್ ಮಾರ್ಕೆಟ್
- ಕೈಗಾರಿಕೆಗಳು
- ಅಂಗಡಿ ಮುಂಗಟ್ಟುಗಳು
- ಜ್ಯೂವೆಲರಿ ಮಳಿಗೆಗಳು
- ಪೆಟ್ರೋಲ್ ಬಂಕ್
- ಚಿತ್ರಮಂದಿರಗಳು ಕ್ಲೋಸ್ ಆಗಿರಲಿವೆ.
ಇದನ್ನೂ ಓದಿ: ಖ್ಯಾತ ನಟಿಗೆ ಸೂಪರ್ ಸ್ಟಾರ್ ರಜನಿಕಾಂತ್ ಬೆದರಿಕೆ? ಅವಳಿಗಾಗಿಯೇ ತಲೈವಾ ವಾರ್ನಿಂಗ್!
ಪರೀಕ್ಷೆ ಮುಂದೂಡಿಕೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ, ರಾಜ್ಯ ಕಾನೂನು ವಿವಿ, ತುಮಕೂರು ವಿವಿ, ವಿಜಯನಗರ ವಿವಿ, ರಾಣಿ ಚೆನ್ನಮ್ಮ ವಿವಿಗಳು ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಹಾಸನ(ಖಾಸಗಿ ಶಾಲಾ-ಕಾಲೇಜು) ದಲ್ಲಿ ರಜೆ ಘೋಷಣೆ ಮಾಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ಉಳಿದ ಜಿಲ್ಲೆಗಳಲ್ಲಿ ರಜೆ ನೀಡುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |