ಕೇಂದ್ರ ನೌಕರರ ವೇತನ ಕಡಿತ; ಬುದ್ದಿ ಭ್ರಮಣೆಯ ಲಕ್ಷಣವೆಂದ ಗುಂಡೂರಾವ್

ಬೆಂಗಳೂರು: ಕೇಂದ್ರ ಸರ್ಕಾರ ನೌಕರರ ಸಂಬಳಕ್ಕೆ ಕತ್ತರಿ ಹಾಕುವುದು ಬುದ್ದಿ ಭ್ರಮಣೆಯ ಲಕ್ಷಣವೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಗುಂಡೂರಾವ್ ಅವರು, ಸಂಸ್ಥೆಯ ಕಾರ್ಯಕ್ಷಮತೆಯ…

dinesh gundu rao vijayaprabha

ಬೆಂಗಳೂರು: ಕೇಂದ್ರ ಸರ್ಕಾರ ನೌಕರರ ಸಂಬಳಕ್ಕೆ ಕತ್ತರಿ ಹಾಕುವುದು ಬುದ್ದಿ ಭ್ರಮಣೆಯ ಲಕ್ಷಣವೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗುಂಡೂರಾವ್ ಅವರು, ಸಂಸ್ಥೆಯ ಕಾರ್ಯಕ್ಷಮತೆಯ ಮೇಲೆ ಕೇಂದ್ರದ ನೌಕರರ ಸಂಬಳ ನಿರ್ಧರಿಸುವುದು ಮೂರ್ಖತನ. ನೌಕರನ ವೈಯಕ್ತಿಕ ಕಾರ್ಯಕ್ಷಮತೆ ಸಂಬಳದ ಮಾನದಂಡವೇ ಹೊರತು ಸಂಸ್ಥೆಯ ಒಟ್ಟಾರೆ ಕಾರ್ಯಕ್ಷಮತೆಯಲ್ಲ. ಒಬ್ಬ ನೌಕರನ ಕಾರ್ಯಕ್ಷಮತೆ ಗರಿಷ್ಟ ಮಟ್ಟದಲ್ಲಿದ್ದು, ಇನ್ಯಾವುದೋ ಕಾರಣದಿಂದ ಸಂಸ್ಥೆಯ ಕಾರ್ಯಕ್ಷಮತೆ ಕುಸಿದರೆ ಆ ನೌಕರನ ಸಂಬಳ ಕಡಿತ ಮಾಡುವುದು ಎಷ್ಟು ಸರಿ?

ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡಲಾಗದಷ್ಟು ದಿವಾಳಿಯಾಗಿದ್ದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ. ಇಂತಹ ಹುಚ್ಚು ನಿಯಮಗಳ ಮೂಲಕ ನೌಕರರ ಸಂಬಳಕ್ಕೆ ಕತ್ತರಿ ಹಾಕುವುದು ಬುದ್ದಿ ಭ್ರಮಣೆಯ ಲಕ್ಷಣ. ತಾನು ಕೆಲಸ ಮಾಡುವ ಸಂಸ್ಥೆಯ ವೈಫಲ್ಯಕ್ಕೆ ನೌಕರನ ಸಂಬಳ ಕಡಿತ ಮಾಡುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಎಂದು ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.