ಬೆಂಗಳೂರು: ಕೊಕೇನ್ ಸಾಗಾಟದ ವೇಳೆ ಬಂಧನಕ್ಕೊಳಗಾಗಿರುವ ಪಶ್ಸಿಮಾ ಬಂಗಾಳದ ಬಿಜೆಪಿ ನಾಯಕಿ, ಯುವ ಮೋರ್ಚಾ ಅಧ್ಯಕ್ಷೆ ಪಮೇಲಾ ಗೋಸ್ವಾಮಿ ಅವರ ಜೊತೆ ಸಂಸದ ತೇಜಸ್ವಿ ಸೂರ್ಯ ಗೆ ನಿಕಟ ಸಂಪರ್ಕವಿದೆ ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಕುರಿತಂತೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಡ್ರಗ್ಸ್ ಪ್ರಕರಣದಲ್ಲಿ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರು ಹಲವು ಬಿಜೆಪಿ ನಾಯಕರು ಬಾಗಿಯಾಗಿದ್ದಾರೆಂದು ಹೇಳಿದ್ದಾರೆ.ಸಂಸದ ತೇಜಸ್ವಿ ಸೂರ್ಯ ಅವರಿಗೆ ಆಕೆಯೊಂದಿಗೆ ನಿಕಟ ಸಂಪರ್ಕವಿದೆ, ಪಕ್ಷದೊಳಗಿನ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿಯೂ ಇರುವಂತಿದೆ, ಅವರನ್ನು ತನಿಖೆಗೊಳಪಡಿಸಲು ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಹಲವು ಬಿಜೆಪಿ ನಾಯಕರು ಬಾಗಿಯಾಗಿದ್ದಾರೆಂದು ಹೇಳಿದ್ದಾರೆ.@Tejasvi_Surya ಅವರಿಗೆ
ಆಕೆಯೊಂದಿಗೆ ನಿಕಟ ಸಂಪರ್ಕವಿದೆ, ಪಕ್ಷದೊಳಗಿನ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿಯೂ ಇರುವಂತಿದೆ,ಅವರನ್ನು ತನಿಖೆಗೊಳಪಡಿಸಲು ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು.#BharatiyaJunkiesParty pic.twitter.com/21fINBxR9x
— Karnataka Congress (@INCKarnataka) February 23, 2021