ನವದೆಹಲಿ: ದೇಶದೆಲ್ಲಡೆ ಕರೋನ ರುದ್ರತಾಂಡವಾಡುತ್ತಿದ್ದು, ಕೊರೋನಾ ಸೋಂಕಿಗೆ ಒಳಗಾದ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಶನಿವಾರ ಹಲವು ಕಲ್ಯಾಣ ಕ್ರಮಗಳನ್ನು ಪ್ರಕಟಿಸಿದೆ.
ಹೌದು, ಕರೋನ ಮಹಾಮಾರಿಯಿಂದಾಗಿ ಮನೆಯ ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಅಡಿಯಲ್ಲಿ ಕುಟುಂಬ ಪಿಂಚಣಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಇಂತಹ ಕುಟುಂಬಗಳಿಗೆ ಇಡಿಎಲ್ಐ ಯೋಜನೆ ಅಡಿಯಲ್ಲಿ ವಿಮಾ ನೀಡಲಾಗುವುದು ಎಂದು ಪ್ರದಾನ ಮಂತ್ರಿ ಕಚೇರಿ ಪಿಎಂಒ ತಿಳಿಸಿದೆ.
ಇನ್ನು, ಇದರಿಂದಾಗಿ ಕೊರೋನಾ ಪೀಡಿತ ಕುಟುಂಬಗಳಿಗೆ ಆರ್ಥಿಕ ಸಹಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.