ದಾವಣಗೆರೆಯ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಸರ್ಕಾರ ಬಿದ್ದು ಹೋಗುವ ಬಗ್ಗೆ ಮಾತನಾಡಿರುವ ವಿಡಿಯೋ ಭಾರಿ ವೈರಲ್ ಆಗಿದ್ದು, ‘ಬಿಜೆಪಿಗೆ ಜನರು ಸಂಪೂರ್ಣ ಬೆಂಬಲ ಕೊಡದೇ ಇರುವುದರಿಂದ ಬಹಳ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಹೌದು, ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ಬೇರೆ ಬೇರೆ ಪಕ್ಷದಿಂದ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 120 ಶಾಸಕರ ಬೆಂಬಲ ನಮ್ಮ ಬಳಿ ಇದೆ. ಈ ಪೈಕಿ ಅಸಮಾಧಾನಗೊಂಡು 8 ಜನ ಶಾಸಕರು ರಾಜೀನಾಮೆ ನೀಡಿದರೂ ಸರ್ಕಾರ ಬಿದ್ದು ಹೋಗುತ್ತದೆ’ ಎಂದು ವಿಡಿಯೋದಲ್ಲಿ ಸಂಸದರು ಹೇಳಿರುವುದು ವಿವಾದವಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



