Datta Jayanti | ದತ್ತ ಜಯಂತಿ ಪೂಜಾ ವಿಧಾನ ಮತ್ತು ಮಹತ್ವ

Datta Jayanti | ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷದ ಪೂರ್ಣಿಮೆಯಂದು ದತ್ತಾತ್ರೇಯ ಜಯ೦ತಿಯನ್ನು (Datta Jayanti) ಆಚರಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವೆಡೆ ಆಚರಿಸಲಾಗುತ್ತಿದ್ದು, ಈ ದಿನಂದು ಭಕ್ತರು ದತ್ತಾತ್ರೇಯನಿಗೆ ವಿವಿಧ…

Datta Jayanti Puja method and significance

Datta Jayanti | ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷದ ಪೂರ್ಣಿಮೆಯಂದು ದತ್ತಾತ್ರೇಯ ಜಯ೦ತಿಯನ್ನು (Datta Jayanti) ಆಚರಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವೆಡೆ ಆಚರಿಸಲಾಗುತ್ತಿದ್ದು, ಈ ದಿನಂದು ಭಕ್ತರು ದತ್ತಾತ್ರೇಯನಿಗೆ ವಿವಿಧ ರೀತಿಯಲ್ಲಿ ಪೂಜೆಯನ್ನು ಸಲ್ಲಿಸಿ, ಆಶೀರ್ವಾದವನ್ನು ಪಡೆಯುತ್ತಾರೆ.

ಇದನ್ನೂ ಓದಿ: Rashi bhavishya | ಈ ರಾಶಿಯವರು ಪ್ರೀತಿಯ ಗೌಪ್ಯತೆ ಕಾಯ್ದುಕೊಳ್ಳಿ, ವ್ಯಾಪಾರಿಗಳು ವ್ಯಾಪಾರ ವಹಿವಾಟುಗಳಲ್ಲಿ ಭಾರಿ ಲಾಭ ಗಳಿಸಲಿದ್ದೀರಿ!

ದತ್ತ ಜಯಂತಿ ಈ ಬಾರಿ ಯಾವಾಗ (When is Datta Jayanti this time?)

Datta Jayanti Puja method and significance

Vijayaprabha Mobile App free

ಈ ಬಾರಿ ದತ್ತ ಜಯಂತಿಯು ಶನಿವಾರ, ಡಿಸೆಂಬರ್ 14, 2024 ರಂದು ಆಚರಿಸಲಾಗುತ್ತಿದ್ದು, ಶೈವ ಧರ್ಮವು ದತ್ತಾತ್ರೇಯರನ್ನು ಶಿವನ ಅವತಾರವೆಂದು ಮತ್ತು ವೈಷ್ಣವರು ವಿಷ್ಣುವಿನ ಅವತಾರವೆಂದು ಪರಿಗಣಿಸಲಿದ್ದು, ದತ್ತಾತ್ರೇಯರನ್ನು ನಾಥ ಪಂಥದ ನವನಾಥ ಸಂಪ್ರದಾಯದ ನಾಯಕ ಎಂದೂ ಪರಿಗಣಿಸಲಾಗಿದೆ.

ದತ್ತ ಜಯಂತಿಯ ಮಹತ್ವ (Significance of Datta Jayanti)

ದತ್ತಾತ್ರೇಯ ಉಪನಿಷದ್‌ ಹೇಳುವ೦ತೆ ಯಾರು ದತ್ತಾತ್ರೇಯ ಜಯ೦ತಿಯ ಮುನ್ನಾ ದಿನ ಉಪವಾಸ ಮಾಡುತ್ತಾರೋ ಅವರ ಪೂರ್ವಜರಿಗೆ ಮುಕ್ತಿ ಹಾಗೂ ಅವರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ಅಲ್ಲದೆ ಅವರ ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯಬಹುದು.

ಇದನ್ನೂ ಓದಿ: Budhaditya Yoga | ಬುಧಾದಿತ್ಯ ಯೋಗ ಹೇಗೆ ರೂಪುಗೊಳ್ಳುತ್ತದೆ? ಬುಧಾದಿತ್ಯ ಯೋಗದ ಮಹತ್ವ

ದತ್ತ ಜಯಂತಿ ಪೂಜಾ ವಿಧಿ (Datta Jayanti Puja ritual)

* ಸೂರ್ಯೋದಯಕ್ಕೆ ಮುನ್ನ ಎದ್ದು ಪವಿತ್ರ ಸ್ನಾನ ಮಾಡಬೇಕು.

* ಉಪವಾಸ ವ್ರತವನ್ನು ಕೈಗೊಳ್ಳಬೇಕು.

* ಪೂಜೆಯ ಸಮಯದಲ್ಲಿ ಸಿಹಿತಿಂಡಿ, ಗಂಧದ ಕಡ್ಡಿ, ದೀಪ ಹಾಗೂ ಹೂಗಳನ್ನು ದೇವರಿಗೆ ಅರ್ಪಿಸಬೇಕು.

* ಪೂಜಾ ಸಮಯದಲ್ಲಿ ಅರಿಶಿಣ, ಕುಂಕುಮ ಹಾಗೂ ಗಂಧವನ್ನು ದತ್ತ ಮೂರ್ತಿಗೆ ಹಚ್ಚಬೇಕು.

* ಪೂಜೆಯ ಬಳಿಕ ಧಾರ್ಮಿಕ ಮಂತ್ರಗಳ ಪಠಣ ಮಾಡಬೇಕು.

* ಜೊತೆಗೆ ಜೀವನ್ಮುಕ್ತ ಗೀತಾ ಹಾಗೂ ಅವಧೂತ ಗೀತವನ್ನು ಓದಬೇಕು.

* ಇನ್ನು, ಓಂ ಶ್ರೀ ಗುರುದೇವ್ ದತ್ತ ಹಾಗು ಶ್ರೀ ಗುರು ದತ್ತಾತ್ರೇಯ ನಮಃ ಎಂದು ಪೂಜೆಯ ಬಳಿಕ ಮಂತ್ರವನ್ನು ಪಠಿಸಬೇಕು.

ಇದನ್ನೂ ಓದಿ: Janma Kundali | ಜಾತಕದಲ್ಲಿ ಯಾವ ಮನೆಯಲ್ಲಿ ಶನಿ ಸ್ವಾಮಿ ಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.