Gadag farmers : ರಾಜ್ಯದಲ್ಲಿ ಮಳೆರಾಯನ ಅಟ್ಟಹಾಸಕ್ಕೆ ಕೃಷಿಕರು ಬೆಚ್ಚಿಬಿದ್ದಿದ್ದು, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ರೈತರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ ನಾಶವಾಗಿದೆ.
ಹೌದು, ಅನ್ನದಾತರು ಸಾಲ-ಸೂಲ ಮಾಡಿ ಈ ಭಾರಿ ಭರ್ಜರಿಯಾಗಿ ಗೋವಿನಜೋಳ ಬೆಳೆದಿದ್ದರು. ಇನ್ನೇನು ಒಂದು ತಿಂಗಳಲ್ಲಿ ಗೋವಿನಜೋಳ ಕಟಾವಿಗೆ ಬಂದು ಫಸಲು ಕೈ ಸೇರಬೇಕು ಎನ್ನುವಷ್ಟರಲ್ಲಿ, ಮಳೆ-ಗಾಳಿಯಿಂದ ಗೋವಿನಜೋಳ ನೆಲಕಚ್ಚಿದೆ. ಇದೀಗ ಬದುಕು ಬೀದಿಗೆ ಬಂದಿದ್ದು, ದಿಕ್ಕು ಕಾಣದೆ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರಲ್ಲ? ಅರ್ಹ ರೈತರು ಫೋನ್‌ನಲ್ಲೇ ಹೀಗೆ ಚೆಕ್ ಮಾಡಿ
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ರೈತರ ಬದುಕು ಮಳೆ-ಗಾಳಿಯಿಂದ ಮೂರಾಬಟ್ಟೆ ಆಗಿದೆ. ಇಷ್ಟೊಂದು ಹಾನಿಯಾದರೂ ಕೃಷಿ ಅಧಿಕಾರಿಗಳು ಭೇಟಿ ನೀಡಿಲ್ಲ. ಕೂಡಲೇ ಹಾನಿಯಾದ ಪ್ರದೇಶಗಳ ಸರ್ವೆ ಮಾಡಿ, ಸೂಕ್ತ ಪರಿಹಾರಕ್ಕಾಗಿ ರೈತರು ಒತ್ತಾಯಿಸಿದ್ದಾರೆ.