ಚೆನ್ನೈ: ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಐಪಿಎಲ್ 2021 ಹರಾಜು ಪ್ರಕ್ರಿಯೆ ನಡೆದಿದ್ದು, ಈ ಬಾರಿ ಅಚ್ಚರಿಯೆಂಬಂತೆ ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್, ಗ್ಲೇನ್ ಮ್ಯಾಕ್ಸ್ ವೆಲ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ಬಾರಿ ದೊಡ್ಡ ಮೊತ್ತಕ್ಕೆ ಖರೀದಿಸಿದ್ದು, ಇನ್ನು ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಲು ಪ್ರಾಂಚೈಸಿ ತಂಡಗಳು ಆಸಕ್ತಿ ತೋರಿಲ್ಲ.
ಯಾವ ಸ್ಟಾರ್ ಆಟಗಾರ ಯಾವ ತಂಡಕ್ಕೆ ಬಿಕರಿಯಾದರು:
ಐಪಿಎಲ್ 14ನೇ ಆವೃತ್ತಿಗೂ ಮುನ್ನ ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ 14.25 ಕೋಟಿ ರೂ.ಗೆ ಆರ್ ಸಿಬಿ ತಂಡ ಖರೀದಿಸಿದ್ದು, ನ್ಯೂಜಿಲ್ಯಾಂಡ್ ಆಲ್‌ರೌಂಡರ್ ಕೈಲ್ ಜೇಮಿಸನ್ ಅವರನ್ನು ದಾಖಲೆಯ ₹15 ಕೋಟಿಗೆ ಖರೀದಿಸಿದೆ.ಇನ್ನುಳಿದಂತೆ ಡ್ಯಾನಿಯಲ್ ಕ್ರಿಶ್ಚಿಯನ್ ಅವರನ್ನು 4.80 ಕೋಟಿಗೆ ಆರ್ ಸಿಬಿ ಖರೀದಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿ ಕನ್ನಡಿಗ ಕೆ.ಗೌತಮ್ ಅವರನ್ನು 9.25 ಕೋಟಿ ರೂ.ಗೆ ಖರೀದಿಸಿದ್ದು, ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ 7 ಕೋಟಿ ಹಾಗು ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು 50 ಲಕ್ಷಕ್ಕೆ ಖರೀದಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ₹2.2 ಕೋಟಿ ಮೊತ್ತಕ್ಕೆ ಸ್ಟೀವ್ ಸ್ಮಿತ್ ಗೆ ಖರೀದಿಸಿದ್ದು, ಉಮೇಶ್ ಯಾದವ್ 1 ಕೋಟಿ, ಟಾಮ್ ಕರಣ್ 5.25 ಕೋಟಿ, ಸ್ಯಾಮ್ ಬಿಲ್ಲಿಂಗ್ 2 ಕೋಟಿಗೆ ಖರೀದಿಸಿದೆ.
ಪಂಜಾಬ್ ಕಿಂಗ್ಸ್ ಆಸ್ಟ್ರೇಲಿಯಾದ ವೇಗಿ ಜಾಯ್ ರಿಚರ್ಡ್‌ಸನ್ ಅವರನ್ನು 14 ಕೋಟಿ ರೂ. ಗೆ ಖರೀದಿಸಿದ್ದು, ಆಸೀಸ್ ಯುವ ವೇಗಿ ರಿಲೆ ಮೆರೆಡಿತ್ 8 ಕೋಟಿ, ಮೊಯಿಸಿಸ್ ಹೆನ್ರಿಕಸ್ 4.20ಕೋಟಿ, ಡೇವಿಡ್ ಮಲನ್ 1.50ಕೋಟಿ, ದೇಸಿ ಆಟಗಾರ ಶಾರುಖ್ ಖಾನ್5.25 ಕೋಟಿ, ಜಲಜ್ ಸಕ್ಸೆನಾ 30 ಲಕ್ಷೆಕ್ಕೆ ಖರೀದಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ದಕ್ಷಿಣ ಆಫ್ರಿಕಾದ ಅಲರೌಂಡರ್ ಕ್ರಿಶ್ ಮಾರಿಸ್ ಅವರನ್ನು ಬರೋಬ್ಬರಿ 16.25ಕೋಟಿಗೆ ಖರೀದಿಸಿದ್ದು, ಬಾಂಗ್ಲಾ ಮುಶ್ಫಿಕುರ್ ರಹೀಮ್ 1 ಕೋಟಿ, ಶಿವಂ ದುಬೆ 4.40 ಕೋಟಿ, ಲಿಯಂ ಲಿವಿಂಗ್ ಸ್ಟೋನ್ ಅವರನ್ನು 75 ಲಕ್ಷಕ್ಕೆ ಖರೀದಿಸಿದೆ.
ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ ತಂಡವು ಆಸ್ಟ್ರೇಲಿಯಾದ ವೇಗಿ ನಾಥನ್ ಕೋಲ್ಟಾರ್ ನೈಲ್ ಅವರನ್ನು 5 ಕೋಟಿಗೆ ಖರೀದಿಸಿದ್ದು, ಆಡಮ್ ಮಿಲ್ಲೆ 3.20 ಕೋಟಿ , ಪಿಯೂಷ್ ಚಾವ್ಲಾ 2.40, ಜೇಮ್ಸ್ ನಿಶಮ್ 50 ಲಕ್ಷಕ್ಕೆ ಹಾಗು ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾ ದೇಶದ ಆಲ್ರೌಂಡರ್ ಶಾಕಿಬ್ ಉಲ್ ಹಸನ್ ಅವರನ್ನು 3.20 ಕೋಟಿಗೆ, ಹರಭಜನ್ ಸಿಂಗ್ 2 ಕೋಟಿಗೆ, ಬೆನ್ ಕಟಿಂಗ್ 75 ಲಕ್ಷ, ಕನ್ನಡಿಗ ಕರುಣ್ ನಾಯರ್ 50 ಲಕ್ಷಕ್ಕೆ ಖರೀದಿಸಿದೆ. ಇನ್ನು ಸನ್ ರೈಜರ್ಸ್ ಹೈದರಾಬಾದ್ ತಂಡ ಕೇಧರ್ ಜಾದವ್ ಅವರನ್ನು 2 ಕೋಟಿಗೆ ಖರೀದಿಸಿದ್ದು, ಮುಜೀಬ್ ಉರ್ ರೆಹಮಾನ್ 1.50 ಕೋಟಿಗೆ ಖರೀದಿಸಿದೆ
ಬಿಕರಿಯಾಗದ ಸ್ಟಾರ್ ಆಟಗಾರರು:
ಈ ಬಾರಿ ಅಚ್ಚರಿಯೆಂಬಂತೆ ಹಲವಾರು ಪ್ರಮುಖ ಆಟಗಾರರನ್ನು ಖರೀದಿಸಲು ಯಾವುದೇ ಪ್ರಾಂಚೈಸಿ ತಂಡಗಳು ಆಸಕ್ತಿ ತೋರಿಲ್ಲ. ಮುಖ್ಯವಾಗಿ ಆಸ್ಟ್ರೇಲಿಯಾದ ನಾಯಕ ಆರನ್ ಫಿಂಚ್, ಮಾರ್ಟಿನ್ ಗುಪ್ಟಿಲ್, ಆಲೆಕ್ಸ್ ಹೇಲ್ಸ್, ಏವಿನ್ ಲೂಯಿಸ್, ಅಲೆಕ್ಸ್ ಕ್ಯಾರಿ, ಜೇಸನ್ ಬೆಹರ್ಡ್ ರೂಫ್, ವ್ಯಾನ್ ಡೇರ್ ಡಾಸನ್, ಕೋರಿ ಆಂಡರ್ಸನ್, ಉಸಿರು ಉದಾನ, ಕ್ರಿಸ್ ಗ್ರೀನ್, ತಿಸಾರ ಪೆರೇರಾ, ಮೋಹಿತ್ ಶರ್ಮ, ವರುಣ್ ಅರುಣ್,ಶೇನ್ ಮಾರ್ಷ್, ಸಂದೀಪ್ ಲಾಮಿಚನೆ, ಶೆಲ್ಡನ್ ಕಾಟ್ರೆಲ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಬಿಕರಿಯಾಗದೇ ಉಳಿದಿದ್ದಾರೆ.