(hsrp-:) ರಾಜ್ಯದ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ HSRP ನಂಬರ್ ಪ್ಲೇಟ್ ಅಳವಡಿಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಎಲ್ಲ ವಾಹನ ಮಾಲೀಕರು ಕೂಡ HSRP ಮಾಡಿಸುವಲ್ಲಿ ಬ್ಯುಸಿ ಆಗಿದ್ದಾರೆ.
ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ‍್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಹೆಚ್.ಎಸ್.ಆರ್.ಪಿ) ಅಳವಡಿಸುವುದು ಕಡ್ಡಾಯವಾಗಿದೆ.
ಈಗಾಗಲೇ ಸರ್ಕಾರ ಹಲವು ಬಾರಿ ಹೆಚ್.ಎಸ್.ಆರ್.ಪಿ ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಸದ್ಯ ಸರ್ಕಾರ ಸೆಪ್ಟೆಂಬರ್ 15, 2024 ನ್ನು ಕೊನೆಯ ದಿನಾಂಕವಾಗಿ ಘೋಷಿಸಿದೆ. ಇನ್ನು ಸೆಪ್ಟೆಂಬರ್ 15 ನಂತರ ನಂಬರ್ ಪ್ಲೇಟ್ ಹಾಕದೆ ಇರುವ ವಾಹನ ಸವಾರರಿಗೆ ದಂಡ ಕೂಡ ವಿಧಿಸಲಾಗುತ್ತದೆ.
2019 ಎಪ್ರಿಲ್ 1 ಕ್ಕಿಂತ ಹಿಂದಿನ ವಾಹನಗಳು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪೊಲೀಸರು 2000 ದಂಡ ವಿಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ನೀವು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಸಿದ್ರೆ ಅದರ ರಶೀದಿಯನ್ನು ಪೊಲೀಸರಿಗೆ ತೋರಿಸಿದ್ರೆ ನೀವು ದಂಡದಿಂದ ಬಚಾವ್ ಆಗಬಹುದಾಗಿದೆ. ಹೌದು, ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್ ಬರುವುದು ತಡವಾದರೆ ನೋಂದಣಿ ಮಾಡಿಸಿದ ರಶೀದಿಯನ್ನು ತೋರಿಸಿದರೆ ನೀವು ದಂಡದಿಂದ ರಿಯಾಯಿತಿ ಪಡೆಯಬಹುದು.