ಬೆಂಗಳೂರು: ಈ ಬಾರಿ ಸಿಎಂ ಯಡಿಯೂರಪ್ಪ ಅವರು 2,43,734 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದೂ, 71,322 ಕೋಟಿ ರೂಪಾಯಿ ರಾಜ್ಯ ಸರ್ಕಾರದ ಪಡೆದ ಸಾಲವಾಗಿದೆ. ಇನ್ನು ಕೊರೋನಾ ಸಂಕಷ್ಟದ ಹಿನ್ನೆಲೆ, ಕೇಂದ್ರದಿಂದ ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಕಡಿಮೆಯಾಗಿದ್ದು, ರಾಜ್ಯದ ಜಿಎಸ್ ಟಿ ಸಂಗ್ರಹಣೆ ಸಹ ಇಳಿಕೆಯಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ರಾಜ್ಯ ಬಜೆಟ್ ಮಂಡಿಸಿದ್ದು, ಯಾವುದಕ್ಕೆ, ಎಷ್ಟು ಅನುದಾನ:
* ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ.
* ಕಿದ್ವಾಯಿ ಮಾದರಿಯ ಆಸ್ಪತ್ರೆಗಳಿಗೆ 100 ಕೋಟಿ.
* ಫಸಲ್ ಬಿಮಾ ಯೋಜನೆಗೆ 900 ಕೋಟಿ ಅನುದಾನ.
* ಗೊಬ್ಬರ ವಿತರಣೆಗೆ 10 ಕೋಟಿ ಅನುದಾನ.
* 500 ಕೋಟಿ ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ.
* ಕಿರು ಆಹಾರ ಸಂಸ್ಕರಣೆ ಉದ್ಯಮಕ್ಕೆ 50 ಕೋಟಿ.
* ಅಡಿಕೆ ಬೆಳೆಗೆ ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಿಸಲು 25 ಕೋಟಿ ಅನುದಾನ.
* 6 ಕೋಟಿ ರೂ. ವೆಚ್ಚದಲ್ಲಿ ಮೌಲ್ಯ ವರ್ಧನಾ ಕೇಂದ್ರಗಳ ಸ್ಥಾಪನೆ
* ಮಹಿಳೆಯರ ಕಲ್ಯಾಣಕ್ಕಾಗಿ 37188 ಕೋಟಿ ಮೀಸಲು.
* ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು ಮೊತ್ತ 21,474 ಕೋಟಿ ರೂ.ಗೆ ಅನುಮೋದನೆ,
* ಶೋಷಿತ ಸಮುದಾಯಗಳ ಅಭಿವೃದ್ಧಿಗೆ 500 ಕೋಟಿ ರೂ.,
* ವಿಪತ್ತು ಚೇತರಿಕೆ & ವ್ಯವಹಾರ ತಾಣಕ್ಕೆ 35 ಕೋಟಿ ರೂ.,
* ನಂದಿದುರ್ಗದ ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂ.,
* ಗೋಪಿನಾಥಮ್ ವನ್ಯಜೀವಿ ಸಫಾರಿ ಯೋಜನೆಗೆ 5 ಕೋಟಿ ರೂ.,
* ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಕಡಲತೀರದಲ್ಲಿ ಪ್ರವಾಸೋದ್ಯಮಕ್ಕೆ 10 ಕೋಟಿ ರೂ.,
* ನೀರು ಸರಬರಾಜು & ಒಳ ಚರಂಡಿ ಯೋಜನೆಗೆ 900 ಕೋಟಿ ರೂ.,
* ಕೊಡಗು & ಹಾವೇರಿಯಲ್ಲಿ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ 8 ಕೋಟಿ ರೂ.,
* ಕರಾವಳಿ ಭದ್ರತಾ ಪಡೆ ತಂತ್ರಜ್ಞಾನ ಅಭಿವೃದ್ಧಿಗೆ 2 ಕೋಟಿ & ಮಲೆನಾಡು, ಕರಾವಳಿಯಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂ.
* 150 ಕೋಟಿ ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು.
* 500 ಕೋಟಿ ರೂ. ಹೊಸ ಹೈಬ್ರಿಡ್ ಬೀಜ ನೀತಿ ಜಾರಿಗೆ ಕ್ರಮ, ಸಾವಯವ ಕೃಷಿ ಉತ್ತೇಜನಕ್ಕೆ.
* ಮಲೆನಾಡು, ಕರಾವಳಿ ಭಾಗದಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ಅನುದಾನ.
* ಕೃಷಿ ಹಾಗೂ ಪೂರಕ ವಲಯಗಳಿಗೆ 31,028 ಕೋಟಿ
* ಒಕ್ಕಲಿಗರ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪನೆ & 500 ಕೋಟಿ ರೂ. ಅನುದಾನ.
* ಉಪ ನಗರ ರೈಲು ಯೋಜನೆಗೆ 15,767 ಕೋಟಿ ರೂ. ಅನುದಾನ, 6 ವರ್ಷಗಳ ಒಳಗೆ ಪೂರ್ಣ.
* ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ.,
* ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ ರೂ.,
* ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.,
* ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಬಸವಣ್ಣನವರ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರೂ.
* ಆದಿ ಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ರೂ.,
* 10 ಕೋಟಿ ರೂ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ.,
* 1 ಕೋಟಿ ರೂ ಎಸ್.ಎಲ್.ಭೈರಪ್ಪ ಅವರ ಪರ್ವ ನಾಟಕ ಪ್ರದರ್ಶನಕ್ಕೆ.,
* ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ 2 ಕೋಟಿ ರೂ.,
* ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪನೆಗೆ 2.5 ಕೋಟಿ ರೂ.,
* ಮಂಡ್ಯ ನಗರ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ ರೂ.,
* ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ 75 ಕೋಟಿ ರೂ ಅನುದಾನ.,
* ಶಿವಕುಮಾರ ಶ್ರೀ ಹಾಗೂ ವಿಶ್ವೇಶ ತೀರ್ಥರ ಸ್ಮೃತಿವನ ಸ್ಥಾಪನೆಗೆ ತಲಾ 2 ಕೋಟಿ ರೂ.,
* ಲೆಸ್ಸರ್ ಫ್ಲೋರಿಕನ್ ಪಕ್ಷಿ ಪ್ರಬೇಧ ಸಂರಕ್ಷಣೆಗೆ 50 ಲಕ್ಷ ರೂ.,
* ರಾಜ್ಯದ ಜೈಲುಗಳ ಸಾಮರ್ಥ್ಯ ಹೆಚ್ಚಳಕ್ಕೆ 40 ಕೋಟಿ ರೂ.,
ರಾಜ್ಯ ಬಜೆಟ್ ಇತರೆ ಮುಖ್ಯಾಂಶಗಳು:
* ಗೋರಕ್ಷಣೆಗೆ ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ತೀರ್ಮಾನ.
* ಸಾರಿಗೆ ಸಂಸ್ಥೆಗಳ ವಾಹನಗಳ ನಿರ್ವಹಣೆಗಾಗಿ 16 ಬಸ್ ಘಟಕ ನಿರ್ಮಾಣ.
* 19 ಜಿಲ್ಲೆಗಳಲ್ಲಿ 25 ಹಾಸಿಗೆಯ ಐಸಿಯು ನಿರ್ಮಾಣ.
* 100 ತಾಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಯ ಐಸಿಯು.
* 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ,
* ರಾಜ್ಯದ ಜನರಿಗೆ ಅನುಕೂಲಕ್ಕಾಗಿ ‘ಒಂದು ರಾಷ್ಟ್ರ ಒಂದು ಕಾರ್ಡ್’ ಜಾರಿಯಾಗಿದ್ದು, ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಎರಡರಲ್ಲೂ ಒಂದೇ ಕಾರ್ಡ್ ಬಳಿಸಿ, ಪ್ರಯಾಣಿಸಬಹುದು.
* ಬೆಳಗಾವಿ, ಧಾರವಾಡ, ಮಂಗಳೂರು, ರಾಯಚೂರು & ಹಾಸನಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಕಾಮಗಾರಿಯನ್ನು ಶೀಘ್ರವೇ ಪೂರ್ಣ, ಈ ವರ್ಷ ಲೋಕಾರ್ಪಣೆ.
* ರಾಜ್ಯದಲ್ಲಿ 52 ಹೊಸ ಬಸ್ ನಿಲ್ದಾಣ ಸ್ಥಾಪನೆ
* ರಾಯಚೂರಿನಲ್ಲಿ ಸುಗಮ ಸಂಚಾರಕ್ಕಾಗಿ ರಿಂಗ್ ರೋಡ್
* ಸಾವಯವ ಇಂಗಾಲ ಹೆಚ್ಚಿಸುವ ಗೊಬ್ಬರ ವಿತರಣೆಗೆ ಕ್ರಮ.
* ವೇತನ, ಪಿಂಚಣಿ, ಸಾಮಾಜಿಕ ಪಿಂಚಣಿ, ಸಬ್ಸಿಡಿಗಳನ್ನು ಕಾಲಕ್ಕೆ ತಕ್ಕಂತೆ ಪಾವತಿಸಲು ತೀರ್ಮಾನ.
* ಶಿವಮೊಗ್ಗ ಆಯುರ್ವೇಧ ಕಾಲೇಜು ಮೇಲ್ದರ್ಜೆಗೆ.
* ರಾಜ್ಯದ 4 ಭಾಗಗಳಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳ ಸ್ಥಾಪನೆ.
* ಎಸ್ಸಿ, ಎಸ್ಟಿ ಉದ್ಯಮಿಗಳ ಸಹಾಯಧನ ಯೋಜನೆ ವಿಸ್ತರಣೆ.
* ಎಸ್ಟಿ ಆಶ್ರಮದ ಶಾಲೆಗಳಿಗೆ ವಾಲ್ಮೀಕಿ ಶಾಲೆ ಎಂದು ನಾಮಕರಣ.
* ಮಂಗಳೂರು-ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ.
* 45 ಲಕ್ಷ ರೂಪಾಯಿವರೆಗೆ ಫ್ಲ್ಯಾಟ್ ಖರೀದಿ ಮಾಡುವಾಗ ಮುದ್ರಾಂಕ ಶುಲ್ಕ ಪಾವತಿಸುತ್ತಿಲ್ಲ.
* ಬೆಂಗಳೂರಿನಲ್ಲಿ 2022ರಲ್ಲಿ ರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ,
* ಪೆಟ್ರೋಲ್, ಡೀಸಲ್ ಮೇಲೆ ಕೆಎಸ್ ಟಿ ಯಥಾಪ್ರಕಾರ
* ಗರ್ಭಿಣಿಯರ ಸ್ಕ್ಯಾನಿಂಗ್ ಉತ್ತೇಜನಕ್ಕೆ ಚಿಗುರು ಕಾರ್ಯಕ್ರಮ.