ನಿಮ್ಮ ಇಪಿಎಫ್ ಖಾತೆಯಲ್ಲಿನ ನಗದು ಬಾಕಿಯ ಪರಿಶೀಲನೆಯನ್ನು ನೀವು ನಿಮ್ಮ ಮೊಬೈಲ್‌ನಲ್ಲೇ ತಿಳಿಯಬಹುದಾಗಿದ್ದು, ಇದಕ್ಕಾಗಿ ನಿಮಗೆ UAN ಅಗತ್ಯವಿಲ್ಲ.
ಹೌದು, ಇದಕ್ಕಾಗಿ ನೀವು ಮೊದಲು ನಿಮ್ಮ EPF ನೋಂದಾಯಿತ ಮೊಬೈಲ್ ಸಂಖ್ಯೆಯಿಂದ EPFOHO UAN ಸಂಖ್ಯೆಯನ್ನು ದಾಖಲಿಸಿ 7738299899ಗೆ ಸಂದೇಶವನ್ನು ಕಳುಹಿಸಬೇಕು.
ಈ ಸಂಖ್ಯೆಗೆ ಸಂದೇಶವನ್ನು ಕಳುಹಿಸಿದ ತಕ್ಷಣ , ನೀವು EPFO ನಿಂದ SMS ಅನ್ನು ಸ್ವೀಕರಿಸುತ್ತೀರಿ, ಅದು ನಿಮ್ಮ PF ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನಿಮಗೆ ತಿಳಿಸುತ್ತದೆ.
ಮಿಸ್ಡ್ ಕಾಲ್ ನೀಡಿ EPF ಬ್ಯಾಲೆನ್ಸ್ :
ಇನ್ನು, ನೀವು ಇಪಿಎಫ್ ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಿ. ಈ ಸೇವೆ ಉಚಿತವಾಗಿ ಲಭ್ಯವಿದೆ.
ಅದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ, ಪ್ಯಾನ್ ಅನ್ನು ನಿಮ್ಮ UANಗೆ ಲಿಂಕ್ ಮಾಡಬೇಕಾಗುತ್ತದೆ. ಏಕೀಕೃತ ಪೋರ್ಟಲ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ಲಿಂಕ್ ಮಾಡಿರಬೇಕು.