ರಾಜ್ಯದಲ್ಲಿ ಶತಕ ದಾಟಿತು ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಏರಿಕೆ: ವ್ಯಾಪಕ ಜನಾಕ್ರೋಶ

ಬೆಂಗಳೂರು: ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದ್ದು, ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಇದೀಗ ಪೆಟ್ರೋಲ್ ದರ 100.14 ರೂ.ಗಳಾಗಿದ್ದು, ಡೀಸೆಲ್ ಬೆಲೆ 92.87 ರೂ.ಗೆ ಬಂದು ತಲುಪಿದ್ದು, ಪವರ್…

gold, silver, petrol and diesel prices vijayaprabha

ಬೆಂಗಳೂರು: ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದ್ದು, ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಇದೀಗ ಪೆಟ್ರೋಲ್ ದರ 100.14 ರೂ.ಗಳಾಗಿದ್ದು, ಡೀಸೆಲ್ ಬೆಲೆ 92.87 ರೂ.ಗೆ ಬಂದು ತಲುಪಿದ್ದು, ಪವರ್ ಪೆಟ್ರೋಲ್ 103.69 ರೂ, ಟರ್ಬೋಜೆಟ್ 96.20 ರೂ.ಆಗಿದೆ ಎಂದು ವರದಿ ತಿಳಿಸಿದೆ.

ಪಂಚರಾಜ್ಯದ ಚುನಾವಣಾ ಫಲಿತಾಂಶ ಮೇ.2ರಂದು ಪ್ರಕಟವಾಗುತ್ತಿದ್ದಂತೆ 94.55 ರೂ.ಗಳಿದ್ದ ಪೆಟ್ರೋಲ್ ದರ ಇಂದು ಶತಕ ಬಾರಿಸಿದ್ದು, 37 ದಿನಗಳಲ್ಲಿ 5.45 ರೂ.ಏರಿಕೆಯಾಗಿದೆ.

Vijayaprabha Mobile App free

ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ:

>ಬೆಂಗಳೂರು: 1 ಲೀ. ಪೆಟ್ರೋಲ್ ಬೆಲೆ ₹98.84/ ಡೀಸೆಲ್ ದರ ₹91.75.
>ಮೈಸೂರು: 1 ಲೀ. ಪೆಟ್ರೋಲ್ ಬೆಲೆ ₹98.59/ ಡೀಸೆಲ್ ದರ ₹91.53.
>ದಾವಣಗೆರೆ: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹93.09.
>ವಿಜಯಪುರ: 1 ಲೀ. ಪೆಟ್ರೋಲ್ ಬೆಲೆ ₹98.56/ ಡೀಸೆಲ್ ದರ ₹91.53.
>ಕೋಲಾರ: 1 ಲೀ. ಪೆಟ್ರೋಲ್ ಬೆಲೆ ₹98.65/ ಡೀಸೆಲ್ ದರ ₹91.59.
>ಚಿಕ್ಕಮಗಳೂರು: 1 ಲೀ. ಪೆಟ್ರೋಲ್ ಬೆಲೆ ₹99.53/ ಡೀಸೆಲ್ ದರ ₹92.27 ದಾಖಲಾಗಿದೆ.

ಬುಧವಾರದ ಚಿನ್ನ, ಬೆಳ್ಳಿ ದರ:

ದೇಶದಲ್ಲಿ ಬುಧವಾರ ಚಿನ್ನದ ಬೆಲೆ ಸಹ ಅಲ್ಪ ಏರಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,768 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,900 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,070 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹76,300 ಆಗಿದೆ.

ಹೈದರಾಬಾದಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,900 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,070 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹76,300 ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.