CBSE results: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ರೋಲ್ ನಂ. ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅಧಿಕೃತ CBSE ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ಪರಿಶೀಲಿಸಬಹುದು.
ಈ ಬಾರಿ 88.39% ರಿಸಲ್ಟ್ ಬಂದಿದೆ. ವಿಜಯವಾಡ ರೀಜನ್ ಅತಿ ಹೆಚ್ಚು 99.60% ಫಲಿತಾಂಶ ದಾಖಲಿಸಿದ್ದರೆ, ಬೆಂಗಳೂರು 95.95%, ತಿರುವನಂತಪುರಂ 99.32%, ಚೆನ್ನೈ 97.39% ಫಲಿತಾಂಶ ದಾಖಲಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತೀರ್ಣ ಪ್ರಮಾಣ ಶೇ. 0.41 ರಷ್ಟು ಹೆಚ್ಚಾಗಿದೆ.
ಹುಡುಗಿಯರು 5.94% ಕ್ಕಿಂತ ಹೆಚ್ಚು ಅಂಕಗಳಿಂದ ಹುಡುಗರನ್ನು ಹಿಂದಿಕ್ಕಿದ್ದಾರೆ. 91% ಕ್ಕಿಂತ ಹೆಚ್ಚು ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.