ಚಿತ್ರರಂಗದಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಕಂಡರೆ ದುರಾಸೆಯಿಂದ ಕಾಡುವವರು ಸಾಕಷ್ಟು ಇದ್ದಾರೆ. ಇಲ್ಲಿ ಬಹುತೇಕರಲ್ಲ, ಆದರೆ ಕೆಲವರು ಮುಖವಾಡ ಧರಿಸಿ ಜೀವನ ನಡೆಸುತ್ತಾರೆ. ಕೆಲವರು ಪ್ರಚಾರದ ಆಸೆಗೆ ಒಳಗಾಗುತ್ತಾರೆ, ಮತ್ತೆ ಕೆಲವರು ಹೆಣ್ಣಿನ ಸೌಂದರ್ಯಕ್ಕಾಗಿ ಸಿನಿಮಾ ನಿರ್ಮಾಣಕ್ಕೆ ಒಡ್ಡಿಕೊಳ್ಳುತ್ತಾರೆ. ಇದರಿಂದಾಗಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಇಂದು ಸಾಮಾನ್ಯವಾಗಿಬಿಟ್ಟಿದೆ.
ಇದು ಕೇವಲ ಒಂದು ಚಿತ್ರೋದ್ಯಮಕ್ಕೆ ಸೀಮಿತವಲ್ಲ, ಎಲ್ಲ ಚಿತ್ರರಂಗಗಳಲ್ಲೂ ಈ ಕಥೆ ಕಾಣಸಿಗುತ್ತದೆ. ಇದಕ್ಕೆ ಉದಾಹರಣೆಯಂತೆ, ಹಲವು ನಾಯಕಿಯರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ, ಬಿಕ್ಕಿದ್ದಾರೆ, ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದವರ ಜನ್ಮವನ್ನು ಶಪಿಸಿದ್ದಾರೆ. ಚಂದನಾ ಅನಂತಕೃಷ್ಣ (Chandana Ananthakrishna) ಇದಕ್ಕೆ ಇತ್ತೀಚಿನ ಉದಾಹರಣೆ.
ಹೌದು, ಚಂದನಾ ಅನಂತಕೃಷ್ಣ—ಕನ್ನಡ ಕಿರುತೆರೆಯ ಚಿರಪರಿಚಿತ ಹೆಸರು. ದಿವಂಗತ ನಟ ಉದಯ್ ಹುತ್ತಿನ ಗದ್ದೆ ಮತ್ತು ಲಲಿತಾಂಜಲಿಯವರ ಪುತ್ರ ಪ್ರತ್ಯಕ್ಷ್ ಅವರನ್ನು ಮದುವೆಯಾದ ಚಂದನಾ, ಕರ್ನಾಟಕದಾದ್ಯಂತ ‘ಚಿನ್ನುಮರಿ’ ಎಂದೇ ಖ್ಯಾತರಾಗಿದ್ದಾರೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಮೂಲಕ ಎಲ್ಲರ ಹೃದಯ ಗೆದ್ದಿರುವ ಚಂದನಾ, ‘ರಾಜಾ ರಾಣಿ’ ಮತ್ತು ‘ಹೂ ಮಳೆ’ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಇಂಥ ಚಂದನಾ ಅನಂತಕೃಷ್ಣ ಇತ್ತೀಚೆಗೆ ತಮಗಾದ ಕಹಿ ಅನುಭವವನ್ನು ‘ವೈ 5 ಟಿವಿ ಕನ್ನಡ’ ಯೂಟ್ಯೂಬ್ ಚಾನೆಲ್‌ನೊಂದಿಗೆ ಹಂಚಿಕೊಂಡಿದ್ದಾರೆ. ಒಂದು ದಿನ ಒಬ್ಬ ವ್ಯಕ್ತಿ ತಾವು ನಿರ್ಮಾಪಕ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದರು ಎಂದು ಚಂದನಾ ತಿಳಿಸಿದ್ದಾರೆ.
ಮುಂದುವರೆದು, ಆ ವ್ಯಕ್ತಿ ಮಾಡರ್ನ್ ಫೋಟೊ ಕಳುಹಿಸುವಂತೆ ಕೇಳಿದ್ದು, ಚಂದನಾ ಅವುಗಳನ್ನು ಕಳುಹಿಸಿದ ಬಳಿಕ ಮೇಕಪ್ ಇಲ್ಲದ ಫೋಟೊ ಕೇಳಿದ್ದಾರೆ. ಚಂದನಾ ಆಗಲೂ ಮಾತನಾಡದೆ ಫೋಟೊ ಕಳುಹಿಸಿದ್ದಾರೆ. ಆದರೆ, ಆ ವ್ಯಕ್ತಿ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದಾಗ ಚಂದನಾಗೆ ಅನುಮಾನ ಮೂಡಿತು. “ಯಾರಾದರೂ ಇಂಥ ಕೋರಿಕೆ ಇಡುತ್ತಾರೆಯೇ?” ಎಂದುಕೊಂಡು ಸುಮ್ಮನಾದರೂ, ಆ ವ್ಯಕ್ತಿ ನಿರಂತರವಾಗಿ ಕರೆ ಮಾಡುತ್ತಲೇ ಇದ್ದ. ಸ್ನೇಹಿತರೊಂದಿಗೆ ಮಾತನಾಡಿದ ಬಳಿಕ ಆ ವ್ಯಕ್ತಿ ಕರೆ ಕಡಿತಗೊಳಿಸಿದರೂ, ಮತ್ತೆ ಹಲವು ಬಾರಿ ಕರೆ ಮಾಡಿದ್ದಾನೆ. ಕೊನೆಗೆ ಚಂದನಾ ಆ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ.
ಇದೇ ಸಂದರ್ಶನದಲ್ಲಿ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡ ಚಂದನಾ, ಒಂದು ಏಜೆನ್ಸಿಯಿಂದ ಮೆಸೇಜ್ ಬಂದಿತ್ತು ಎಂದಿದ್ದಾರೆ. “ಮೂರು ತಿಂಗಳ ಚಿತ್ರೀಕರಣ ಇರುತ್ತದೆ, ಆದರೆ ರಾಜಿಯಾಗಬೇಕು, ಹೊಂದಾಣಿಕೆ ಮಾಡಿಕೊಳ್ಳಬೇಕು” ಎಂದು ಆ ಮೆಸೇಜ್‌ನಲ್ಲಿ ಇತ್ತು. ಆ ನಂಬರ್ ಅನ್ನೂ ಚಂದನಾ ಬ್ಲಾಕ್ ಮಾಡಿದ್ದಾರೆ.
ಸದ್ಯ, ಚಂದನಾ ಅವರ ಮಾತುಗಳು ಕಿರುತೆರೆ ಮತ್ತು ಬೆಳ್ಳಿತೆರೆ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಲೈವ್‌ನಲ್ಲಿ ಮಾತನಾಡಲು ಬಯಸಿದ ಆ ‘ನಿರ್ಮಾಪಕ’ ಯಾರೆಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. “ಒಬ್ಬ ವ್ಯಕ್ತಿ ಕರೆ ಮಾಡಿ ಆಫರ್ ನೀಡಿದ, ಆದರೆ ನನ್ನ ಗ್ಲಾಮರಸ್ ಫೋಟೊ ಕೇಳಿದ. ನಾನು ಅಷ್ಟೊಂದು ಮಾಡರ್ನ್ ಫೋಟೊ ಶೂಟ್ ಮಾಡಿರಲಿಲ್ಲ, ಆದರೂ ಕೆಲ ಫೋಟೊಗಳನ್ನು ಕಳುಹಿಸಿದೆ” ಎಂದು ಚಂದನಾ ಹೇಳಿದ್ದಾರೆ.
View this post on Instagram