Cauvery Tirthodbhava । ಕರುನಾಡ ಜೀವನಾಡಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ ಜರುಗಲಿದ್ದು, ಸಹಸ್ರಾರು ಭಕ್ತರು ಈ ಪುಣ್ಯಕ್ಷಣಕ್ಕಾಗಿ ಕಾತರರಾಗಿದ್ದಾರೆ.
ಇದರ ಅಂಗವಾಗಿ ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು, ನೂಕುನುಗ್ಗಲು ತಪ್ಪಿಸಲು ಬ್ಯಾರಿಕೇಡ್ ಹಾಗೂ ಸಿಸಿ ಕ್ಯಾಮರಾಗಳ ವ್ಯವಸ್ಥೆ ಮಾಡಲಾಗಿದೆ.
ತಲಕಾವೇರಿಯಲ್ಲಿ ಕಾವೇರಿ ತೀರ್ಥರೂಪಿಣಿ: ಐತಿಹಾಸಿಕ, ಪೌರಾಣಿಕ ಹಿನ್ನೆಲೆ
ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ತೀರ್ಥೋದ್ಭವಕ್ಕೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಗಳಿವೆ. ಲೋಕಕಲ್ಯಾಣಕ್ಕಾಗಿ ಹರಿಯುತ್ತಿದ್ದ ಕಾವೇರಿಯನ್ನು ಮಹಿಳೆಯರು ತಡೆದಾಗ, ಪ್ರತಿ ವರ್ಷ ತುಲಾ ಸಂಕ್ರಮಣದ ಮೊದಲ ದಿನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡುವುದಾಗಿ ಅಭಯ ನೀಡಿದ್ದಳು. ಈ ನಂಬಿಕೆಯಂತೆ, ಪ್ರತಿ ವರ್ಷ ತುಲಾ ಮಾಸದ ಮೊದಲ ದಿನ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ.
ಕಾವೇರಿ ತೀರ್ಥೋದ್ಭವ: ಪ್ರತಿವರ್ಷ ಲಕ್ಷಾಂತರ ಭಕ್ತರ ಆಗಮನ
ಪ್ರತಿ ವರ್ಷ ನಡೆಯುವ ಕಾವೇರಿ ಸಂಕ್ರಮಣ ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಕೊಡಗು ಜಿಲ್ಲೆ ಮಾತ್ರವಲ್ಲದೆ ನಾಡಿನ ಮೂಲೆಮೂಲಗಳಿಂದ ಲಕ್ಷಾಂತರ ಭಕ್ತರು ಜಿಲ್ಲೆಗೆ ಆಗಮಿಸುತ್ತಾರೆ. ಬ್ರಹ್ಮ ಕುಂಡಿಕೆಯಲ್ಲಿ ತೀರ್ಥೋದ್ಭವ ನಡೆಯಲಿದೆ. ಆ ಕ್ಷಣಗಳಿಗಾಗಿ ನಾಡಿನ ಸಹಸ್ರಾರು ಭಕ್ತರು ಕಾತರರಾಗಿದ್ದು ಬಳಿಕ ಸಾವಿರಾರು ಭಕ್ತರು ಕೊಳದಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥವನ್ನು ತಮ್ಮ ಮನೆಗಳಿಗೆ ಕೊಂಡೊಯ್ಯಲಿದ್ದಾರೆ. ಜಿಲ್ಲಾಡಳಿತವು ಈ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತಾದಿಗಳಿಗಾಗಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಕಾವೇರಿ ತೀರ್ಥೋದ್ಭವಕ್ಕೆ ಸಿದ್ಧತೆ, ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು
ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ನೂಕುನುಗ್ಗಲು ತಪ್ಪಿಸಲು ಬ್ಯಾರಿಕೇಡ್ ಅಳವಡಿಸಿ, ಒಂದೆಡೆ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ತೀರ್ಥ ಸಂಗ್ರಹಿಸಲು ಅನುಕೂಲವಾಗುವಂತೆ ಹಲವು ಕೌಂಟರ್ ಗಳನ್ನು ತೆರೆದು, ತೀರ್ಥ ವಿತರಣೆಗೆ ಸಿದ್ಧತೆ ನಡೆಸಲಾಗಿದೆ.
ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಅರ್ಚಕರು ಹೇಳಿದ್ದೇನು?
ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಐತಿಹಾಸಿಕ ಹಿನ್ನೆಲೆಯನ್ನು ಅರ್ಚಕ ಗುರುರಾಜ್ ಆಚಾರ್ ವಿವರಿಸಿದರು. ಪುರಾಣದ ಪ್ರಕಾರ, ಅಗಸ್ತ್ಯ ಮುನಿಗಳು ತಮ್ಮ ಪತ್ನಿ ಲೋಪಾಮುದ್ರೆಯನ್ನು (ಕಾವೇರಿ) ಕಮಂಡಲದಲ್ಲಿ ಇರಿಸಿಕೊಂಡಿದ್ದರು. ಗಣಪತಿ ಕಾಗೆಯ ರೂಪದಲ್ಲಿ ಬಂದು ಕಮಂಡಲವನ್ನು ಉರುಳಿಸಿದಾಗ ಕಾವೇರಿ ಉಗಮವಾಯಿತು. ಈ ಪವಿತ್ರ ನದಿ ನಾಗತೀರ್ಥದಿಂದ ಹೊರಟು ಭಾಗಮಂಡಲ ಮತ್ತು ತ್ರಿವೇಣಿ ಸಂಗಮದ ಕಡೆಗೆ ಹರಿಯುತ್ತದೆ.




