Singer Suhana Syed । ‘ಸರಿಗಮಪ’ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ.
ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ. ಅಂತರ್‌ಧರ್ಮೀಯ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಪ್ತ ವರ್ಗದವರಷ್ಟೇ ಪಾಲ್ಗೊಳ್ಳುತ್ತಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಜೊತೆ ಸುಹಾನಾ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಮದುವೆಗೂ ಮುನ್ನ ಭಾವಿ ಪತಿ ಜೊತೆ ಫೋಟೋಗೆ ಫೋಸ್ ಕೊಡುವಾಗ ಫೋಟೋಗಳು ರಿವೀಲ್ ಆಗಿದೆ.
ಹಿಜಬ್ ಧರಿಸಿ ಹಿಂದೂ ಭಜನೆ ಹಾಡುವ ಮೂಲಕ ವಿವಾದಕ್ಕೊಳಗಾಗಿದ್ದ ಸುಹಾನಾ, ತಮ್ಮ ಪ್ರೀತಿಗೆ ಅಡೆತಡೆಗಳನ್ನು ದಾಟಿ ಮದುವೆಯಾಗುತ್ತಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ‘ನಮ್ಮ ನಡೆ ವಿಶ್ವಮಾನವತ್ವದೆಡೆಗೆ’ ಎಂದು ಉಲ್ಲೇಖಿಸಲಾಗಿದೆ.




