ನಿಮಗೆ ತಿಳಿಸದೇ ನಿಮ್ಮ ಕುಟುಂಬದವರು ಆಸ್ತಿ ಮಾರಾಟ ಮಾಡಿದರೆ ಏನು ಮಾಡಬೇಕು? ಕೇಸ್ ಹಾಕಬಹುದೇ ? ಇಲ್ಲಿದೆ ನೋಡಿ
ಒಂದು ವೇಳೆ ನಿಮಗೆ ತಿಳಿಸದೇ ನಿಮ್ಮ ಕುಟುಂಬದವರು ಆಸ್ತಿಯನ್ನು ಮಾರಾಟ ಮಾಡಿದರೆ ಕೂಡಲೇ ವಕೀಲರನ್ನು ಸಂಪರ್ಕಿಸಿ ಅವರ ವಿರುದ್ಧ ವಿಭಾಗದ ದಾವೆ ಹಾಕಿ. ಮಾರಿದ ಆಸ್ತಿಯನ್ನು ಕ್ರಯಕ್ಕೆ ಪಡೆದವರನ್ನೂ ದಾವೆಯಲ್ಲಿ ಪಾರ್ಟಿ ಮಾಡಿ.
ನಿಮಗೆ ವಿಷಯ ಯಾವಾಗ ತಿಳಿಯಿತು ಎನ್ನುವುದನ್ನೂ ದಾವೆಯಲ್ಲಿ ಸರಿಯಾಗಿ ಬರೆಯಿರಿ. ಆಗ ನಿಮ್ಮ ಭಾಗ ನಿಮಗೆ ಸಿಗುತ್ತದೆ. ಕೆಲವೊಮ್ಮೆ ಮಾರಾಟ ಮಾಡಿದ ಆಸ್ತಿ ಬಿಟ್ಟು ಉಳಿದ ಆಸ್ತಿಯಲ್ಲಿ ನಿಮಗೆ ಹೆಚ್ಚಿನ ಭಾಗ ಕೊಡುವ ಸಾಧ್ಯತೆ ಇರುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




