By-election : ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯಲಿದೆ.
ಹೌದು, ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್ ಹಾಗೂ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ, ಶಿಗ್ಗಾವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಯಾಸೀರ್ ಅಹ್ಮದ್ ಖಾನ್ ಪಠಾಣ, ಸಂಡೂರಿನಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ಹಾಗೂ ಬಿಜೆಪಿಯ ಬಂಗಾರು ಹನುಮಂತು ನಡುವೆ ನೇರ ಹಣಾಹಣಿಯಿದೆ. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ವೋಟಿಂಗ್ ನಡೆಯಲಿದೆ.
ಇದನ್ನೂ ಓದಿ: Tulsi Puja | ಉತ್ಥಾನ ದ್ವಾದಶಿ; ತುಳಸಿ ಪೂಜೆಯ ವಿಧಿ ವಿಧಾನ
By-election : ಎಲ್ಲೆಲ್ಲಿ ಇಂದು ಉಪಚುನಾವಣೆ?
ರಾಜಸ್ಥಾನದ ಜುಂಜುನು, ದೌಸಾ, ದಿಯೋಲಿ-ಉನಿಯಾರಾ, ಖಿನ್ವಸರ್, ಚೌರಾಸಿ, ಸಾಲುಂಬರ್ & ರಾಮಗಢ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳದ ತಲ್ದಂಗ್ರಾ, ಸಿತೈ-ಎಸ್‌ಸಿ, ನೈಹತಿ, ಹರೋವಾ, ಮೇದಿನಿಪುರ್ ಮತ್ತು ಮದರಿಹತ್ ಒಟ್ಟು 6 ಕ್ಷೇತ್ರಗಳಲ್ಲಿ ಬೈಎಲೆಕ್ಷನ್ ನಡೆಯಲಿದೆ. ಅಸ್ಸಾಂನ ಧೋಲೈ, ಬೆಹಾಲಿ, ಸಮಗುರಿ, ಬೊಂಗೈಗಾಂವ್ ಮತ್ತು ಸಿದ್ಲಿ, ಬಿಹಾರದ ರಾಮಗಢ, ತರಾರಿ, ಇಮಾಮ್‌ಗಂಜ್ ಮತ್ತು ಬೆಳಗಂಜ್, ಮಧ್ಯಪ್ರದೇಶ ಬುದ್ನಿ & ವಿಜಯಪುರ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: Panchanga | ಇಂದು ಬುಧವಾರ 13-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
By-election : ಸರ್ಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ಶಾಲಾ-ಕಾಲೇಜಿಗೆ ಇಂದು ರಜೆ
ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆ ಮತದಾನ ಇಂದು ನಡೆಯಲಿದ್ದು, ಈ ಹಿನ್ನೆಲೆ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಅರ್ಹ ಮತದಾರರಿಗೆ 1 ದಿನದ ವೇತನ ಸಹಿತ ರಜೆ ಇರಲಿದೆ.
ಎಲ್ಲ ರಾಜ್ಯ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿ), ರಾಷ್ಟ್ರೀಕೃತ ಬ್ಯಾಂಕ್, ಜೀವ ವಿಮಾ ನಿಗಮ, ಹಣಕಾಸು ಸಂಸ್ಥೆಗಳು & ಇತರ ಔದ್ಯಮಿಕ ಸಂಸ್ಥೆಗಳಲ್ಲಿ ಖಾಯಂ/ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅರ್ಹ ಮತದಾರರಿಗೆ ರಜೆ ಮಂಜೂರು ಮಾಡಲಾಗಿದೆ.