Navratri : ನವರಾತ್ರಿ ಉತ್ಸವದಲ್ಲಿ ದುರ್ಗಾಮಾತೆಯ (Durgadevi Avatars) ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ಮುಗಿಯುವ ಮುನ್ನ ನಾಣ್ಯಗಳು, ಲಕ್ಷ್ಮೀ ದೇವಿಯ ಚಿತ್ರ ಸೇರಿದಂತೆ ಈ ವಸ್ತುಗಳನ್ನು ತಪ್ಪದೆ ಮನೆಗೆ ತರಬೇಕು. ಅವು ಯಾವುವು ಇಲ್ಲದೆ ನೋಡಿ
ನಾಣ್ಯಗಳು – Coins
ನವರಾತ್ರಿ ಹಬ್ಬದ ವೇಳೆ ಮನೆಗೆ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ತರುವುದು ಬಹಳ ಶುಭಫಲಗಳನ್ನು ನೀಡುತ್ತದೆ. ಇದರಿಂದ ನಿಮ್ಮ ಸ೦ಪತ್ತು ಸಹ ಅಧಿಕವಾಗುತ್ತದೆ. ನಾಣ್ಯಗಳನ್ನು ತಂದು ದೇವಿಯ ಬಳಿಯಿಟ್ಟು ಪೂಜೆ ಮಾಡಿದರೆ ಆರ್ಥಿಕ ಲಾಭ ಸಿಗುತ್ತದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತದೆ.
ಇದನ್ನೂ ಓದಿ: ನಿತ್ಯ ಪಂಚಾಂಗ | ಇಂದು ಮೂಲಾ ನಕ್ಷತ್ರ,; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ ಇಲ್ಲಿದೆ
ಲಕ್ಷ್ಮೀ ದೇವಿಯ ಚಿತ್ರ – Image of Goddess Lakshmi
ಹಬ್ಬದ ಸಮಯದಲ್ಲಿ ಮನೆಗೆ ಲಕ್ಷ್ಮಿದೇವಿಯ ಚಿತ್ರ ತಂದು ಪೂಜಿಸಿದರೆ ಅನೇಕ ರೀತಿಯ ಲಾಭಗಳು ದೊರಕುತ್ತವೆ ಎನ್ನಲಾಗುತ್ತದೆ. ಅಲ್ಲದೇ, ಸಂಪತ್ತು ಸಹ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಕೂಡ ಲಾಭವಾಗುತ್ತದೆ.
ತುಳಸಿ ಗಿಡ – Tulsi plant
ನವರಾತ್ರಿಯ ಸಮಯದಲ್ಲಿ, ತುಳಸಿ ಗಿಡವನ್ನು ನಿಮ್ಮ ಮನೆಗೆ ತಂದರೆ ಬಹಳ ಅದೃಷ್ಟ ಎನ್ನಲಾಗುತ್ತದೆ. ಮುಖ್ಯವಾಗಿ ಇದನ್ನು ಪೂರ್ವ ಅಥವಾ ಈಶಾನ್ಯ ಮೂಲೆಯಲ್ಲಿ ನೆಡಬೇಕು. ಪ್ರತಿದಿನ ತುಪ್ಪದಿಂದ ಮಾಡಿದ ದೀಪವನ್ನ ಹಚ್ಚಿ ಪೂಜಿಸಿ. ಇದನ್ನು ತರುವುದರಿಂದ ಲಕ್ಷ್ಮಿಯ ಆಶೀರ್ವಾದ ಉಂಟಾಗಿ ನೀವು ಸಂಪತ್ತು ಮತ್ತು ಯಶಸ್ಸು ಪಡೆಯಬಹುದು.
ಇದನ್ನೂ ಓದಿ: ಇಂದು ನವರಾತ್ರಿ ಏಳನೇ ದಿನ ಕಾಳರಾತ್ರಿ ಸ್ವರೂಪ: ಪೂಜೆ ವಿಧಾನ, ಮಹತ್ವ
ಕಮಲದ ಹೂವು – lotus flower
ದೇವಿಗೆ ಕಮಲದ ಹೂವು ಎ೦ದರೆ ಅತ್ಯಂತ ಪ್ರೀತಿ, ಹಾಗಾಗಿ ತಪ್ಪದೇ ಹಬ್ಬದ ಸಮಯದಲ್ಲಿ ಕಮಲದ ಹೂವುಗಳನ್ನ ಮನೆಗೆ ತರಬೇಕು. ಲಕ್ಷ್ಮಿ ದೇವಿಯ ಕೃಪೆ ಪಡೆಯಲು ಕಮಲದ ಹೂವನ್ನು ಅರ್ಪಿಸಬೇಕು. ಇದರಿಂದ ಹಣಕಾಸಿನ ಲಾಭವಾಗುತ್ತದೆ. ಸಾಲದ ಸಮಸ್ಯೆಗಳಿದ್ದರೆ ಅದರಿಂದ ಸಹ ಮುಕ್ತಿ ದೊರಕುತ್ತದೆ.
ಬಾಳೆ ಗಿಡಗಳು – Banana plant
ಬಾಳೆ ಗಿಡಗಳನ್ನು ಮನೆಗೆ ತಂದು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಮಂತ್ರಗಳನ್ನು ಪಠಿಸುತ್ತಾ ಪ್ರತಿ ಗುರುವಾರ ಗಿಡಕ್ಕೆ ಹಾಲು ಮತ್ತು ನೀರನ್ನು ಅರ್ಪಿಸಿದರೆ ನಿಮ್ಮ ಆರ್ಥಿಕ ತೊಂದರೆಗಳಿಗೆ ಪರಿಹಾರ ಪಡೆಯಬಹುದು. ಇನ್ನು ಬಾಳೆಗಿಡ ನೆಡಲು ಸ್ಥಳಾವಕಾಶ ಇಲ್ಲದಿದ್ದರೆ ಬಾಳೆಹಣ್ಣನ್ನು ಮನೆಗೆ ತರಬಹುದು.
ಇದನ್ನೂ ಓದಿ : ಇಂದು ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿಯ ಪೂಜೆ; ಕಾತ್ಯಾಯಿನಿ ದೇವಿಯ ಆರಾಧಕರಾಗಿದ್ದ ಶ್ರೀ ರಾಮ, ಶ್ರೀ ಕೃಷ್ಣ
ಪಾರಿಜಾತ ಪುಷ್ಪ – Parijata flower
ಪಾರಿಜಾತ ಹೂವು ಅದ್ಭುತವಾದ ಪರಿಮಳವನ್ನ ಹೊರಸೂಸುತ್ತದೆ. ಇದರ ಗಿಡವನ್ನು ನವರಾತ್ರಿಯಲ್ಲಿ ಮನೆಗೆ ತ೦ದರೆ ಸಂಪತ್ತು ಬರುತ್ತದೆ. ಸ್ವಲ್ಪ ಹಣವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಗಿಡಕ್ಕೆ ಕಟ್ಟುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಎನ್ನುವ ನಂಬಿಕೆಯೂ ಇದೆ.




