ಮುಜಫರ್ ನಗರ: ಜೋಶ್‌ನಲ್ಲಿ ಪ್ರಾರಂಭವಾದ ವಧುವಿನ ವಿವಾಹ ಮೆರವಣಿಗೆ ಸ್ವಲ್ಪ ಹೊತ್ತಿನಲ್ಲೇ ದುರಂತಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.
ಹೌದು ಮೇಳ ತಾಳದೊಂದಿಗೆ ಮೆರವಣಿಗೆ ಮೂಲಕ ವಧುವನ್ನು ಕಾರಿನಲ್ಲಿ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿರುವ ವಿವಾಹ ಮಂಟಪಕ್ಕೆ ಕರೆತರುತ್ತಿದ್ದರು. ಸಂಬಂಧಿಕರು ಮತ್ತು ಸ್ನೇಹಿತರೆಲ್ಲರೂ ಸಂತೋಷದಿಂದ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ವಿಶೇಷ ವೇಷಭೂಷಣ ಮತ್ತು ಸನ್ ಗ್ಲಾಸ್ ಧರಿಸಿದ್ದ ವಧುವು ತನ್ನ ಆನಂದವನ್ನು ತಡೆದುಕೊಳ್ಳದೆ ಕಾರಿನ ಟಾಪ್ ತೆಗೆದು ಉತ್ಸಾಹದಿಂದ ಡ್ಯಾನ್ಸ್ ಮಾಡುತ್ತಿದ್ದಳು.
ಆದರೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಅತಿ ವೇಗವಾಗಿ ಬಂದ ಕಾರು, ವಧುವಿನ ಕಾರ್ ಪಕ್ಕದಲ್ಲಿ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ವರನ ಸಹೋದರ ಸ್ಥಳದಲ್ಲೇ ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್, ಈ ಘಟನೆಯಲ್ಲಿ ವಧು ಬದುಕುಳಿದಿದ್ದು, ಈ ಘಟನೆಯ ವಿಡಿಯೋ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
This dance could have been fatal – open sun-roofed car dancing Bride in UP’s Muzaffarnagar has a narrow escape after a speeding vehicle hits Baraat on road leaving one dead and many injured @umeshpathaklive @Uppolice pic.twitter.com/hMmzhxTgsV
— Utkarsh Singh (@utkarshs88) February 17, 2021