BPL ration card : ಇನ್ಮುಂದೆ ಪಡಿತರ ಚೀಟಿಯನ್ನು ಪಡೆಯುವುದು ಸುಲಭವಲ್ಲ. ಹೌದು, ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಪಡಿತರ ಚೀಟಿಯನ್ನು ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಇದರಿಂದ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿವವರಿಗೆ ಸರ್ಕಾರ ಬಿಗ್ ನೀಡಿದೆ.
ಹೌದು, ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಆರ್ಥಿಕ ಸ್ಥಿತಿಯನ್ನು ಸರ್ಕಾರವು ಪರಿಶೀಲಿಸುತ್ತದೆ. ಕಡು ಬಡವರು, ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು, ಸರ್ಕಾರದ ಕೆಲಸ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಕುಟುಂಬಗಳು ಬಿಪಿಎಲ್ ಪಡಿತರ ಕಾರ್ಡ್ ಪಡೆಯಲು ಅರ್ಹರಲ್ಲ.
ಇದನ್ನೂ ಓದಿ: PM Kisan ಹಣ ಬಂದಿಲ್ಲವೇ? ಲಿಸ್ಟ್‌ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ; ಮುಂದಿನ ಕಂತಿನ ಹಣಕ್ಕಾಗಿ ಈ ಕೆಲಸ ಮಾಡಲೇಬೇಕು!
BPL ration card : ಬಿಪಿಎಲ್ ಕಾರ್ಡ್ ರದ್ದಾದರೂ ಭಯಪಡಬೇಕಿಲ್ಲ..!
ಇನ್ನು, ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದ್ದು, ಕಳ್ಳ ಮಾರ್ಗದಿಂದ BPL ಕಾರ್ಡ್ ಪಡೆದುಕೊಂಡಿದ್ದರೆ ಅಂತವರ ಕಾರ್ಡ್ ರದ್ದು ಮಾಡಲಾಗುವುದು ಸರ್ಕಾರ ತಿಳಿಸಿತ್ತು. ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ ಎಂಬ ಭರವಸೆಯನ್ನು ಆಹಾರ ಸಚಿವ ಮುನಿಯಪ್ಪ ನೀಡಿದರೆ.
ಹೌದು, ಕೋಲಾರದಲ್ಲಿ ಶುಕ್ರವಾರ ಮಾತನಾಡಿದ ಸಚಿವ ವಿ.ಮುನಿಯಪ್ಪ ಅವರು, BPL ಕಾರ್ಡ್ ರದ್ದಾದರೂ ಕೂಡ ಆ ಸದಸ್ಯರನ್ನ APL ಕಾರ್ಡ್‌ಗೆ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇನ್ನು,ರಾಜ್ಯದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅನ್ನಭಾಗ್ಯ ಯೋಜನೆಯ ಹಣ ಈವರೆಗೆ ಬಿಡುಗಡೆಯಾಗಿಲ್ಲ. ಮುಂದಿನ ವಾರ ಖಂಡಿತವಾಗಿಯೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.