Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » best government savings schemes
ಪ್ರಮುಖ ಸುದ್ದಿ

Savings Schemes | ಹಣ ಉಳಿತಾಯ ಮಾಡಲು ಸರ್ಕಾರದ ಅತ್ಯುತ್ತಮ ಉಳಿತಾಯ ಯೋಜನೆಗಳಿವು!

Savings Schemes : ಹಣ ಉಳಿತಾಯ ಮಾಡಲುಪೋಸ್ಟ್ ಆಫೀಸ್ ಉಳಿತಾಯ ಖಾತೆ, ಮಾಸಿಕ ಆದಾಯ ಯೋಜನೆ, ಪಿಪಿಎಫ್ ಸೇರಿದಂತೆ ಸರ್ಕಾರದ ಅತ್ಯುತ್ತಮ ಉಳಿತಾಯ ಯೋಜನೆಗಳು ಇಲ್ಲಿವೆ ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post Office…

Author Avatar

Vijayaprabha

December 16, 202410:52 am Kisan Vikas PatraMonthly Income SchemeNational Savings Time DepositPost Office Savings AccountPPFSavings Schemeಉಳಿತಾಯ ಯೋಜನೆಪಿಪಿಎಫ್ಪೋಸ್ಟ್ ಆಫೀಸ್ ಉಳಿತಾಯ ಖಾತೆಮಾಸಿಕ ಆದಾಯ ಯೋಜನೆರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ
Savings Schemes

Savings Schemes : ಹಣ ಉಳಿತಾಯ ಮಾಡಲುಪೋಸ್ಟ್ ಆಫೀಸ್ ಉಳಿತಾಯ ಖಾತೆ, ಮಾಸಿಕ ಆದಾಯ ಯೋಜನೆ, ಪಿಪಿಎಫ್ ಸೇರಿದಂತೆ ಸರ್ಕಾರದ ಅತ್ಯುತ್ತಮ ಉಳಿತಾಯ ಯೋಜನೆಗಳು ಇಲ್ಲಿವೆ

ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post Office Savings Account)

ಈ ಯೋಜನೆಯಲ್ಲಿ ನೀವು ಕನಿಷ್ಠ 500 ರೂ. ಹೂಡಿಕೆ ಮಾಡಬಹುದಾಗಿದೆ. ಖಾತೆಯಲ್ಲಿ ಕನಿಷ್ಠ 500 ರೂ.ಗಳನ್ನು ಉಳಿಸಿಕೊಳ್ಳಲು ವಿಫಲವಾದರೆ ಅಥವಾ ಖಾತೆಯ ಬ್ಯಾಲೆನ್ಸ್ ಶೂನ್ಯವನ್ನು ತಲುಪಿದರೆ ಖಾತೆಯನ್ನು ಮುಚ್ಚಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕ ಶೇ.4 ಬಡ್ಡಿದರ ಸಿಗುತ್ತದೆ.

ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ (National Savings Time Deposit)

ಕನಿಷ್ಠ 1000ರೂ. ಠೇವಣಿಯೊಂದಿಗೆ ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ಗರಿಷ್ಠ ಮಿತಿ ಎ೦ಬುದೇ ಇಲ್ಲ. ಬಡ್ಡಿಯು ಒ೦ದು ವರ್ಷದ ಅವಧಿಯ ಠೇವಣಿಯ ಮೇಲೆ ಶೇಕಡಾ 6.9, ಎರಡು ವರ್ಷಗಳ ಅವಧಿಯ ಮೇಲೆ ಶೇಕಡಾ 7, ಮೂರು ವರ್ಷಗಳ ಅವಧಿಯ ಮೇಲೆ ಶೇಕಡಾ 710 ರಷ್ಟು ಬಡ್ಡಿಯನ್ನು ನಿಯಮಿತವಾಗಿ ನೀಡಲಾಗುತ್ತದೆ.

Vijayaprabha Mobile App free

ಇದನ್ನೂ ಓದಿ: Agricultural loan | RBIನಿಂದ ಭರ್ಜರಿ ಗುಡ್ ನ್ಯೂಸ್; ₹2 ಲಕ್ಷ ಕೃಷಿ ಸಾಲ

ಐದು ವರ್ಷಗಳ RD ಯೋಜನೆ (RD Schemes)

ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಕನಿಷ್ಠ 100 ರೂ. ಠೇವಣಿ ಮಾಡಿ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಪ್ರಸ್ತುತ 6.7 ಶೇಕಡಾ ಬಡ್ಡಿ ಸಿಗುತ್ತದೆ.

ಮಾಸಿಕ ಆದಾಯ ಯೋಜನೆ (Monthly Income Scheme)

ಈ ಯೋಜನೆಯಲ್ಲಿ ಹೂಡಿಕೆದಾರರು ಮಾಸಿಕ ಆದಾಯವನ್ನು ಪಡೆಯಬಹುದು. ಒ೦ದೇ ಖಾತೆಯಡಿ ಕನಿಷ್ಠ 1000ರೂ ಹಾಗೂ ಗರಿಷ್ಠ 9 ಲಕ್ಷರೂ ಹಾಗೂ ಜಂಟಿ ಖಾತೆಯಡಿ ಗರಿಷ್ಠ 15 ಲಕ್ಷ ರೂಗಳನ್ನು ಹೂಡಿಕೆ ಮಾಡಬಹುದಾಗಿದ್ದು, ಖಾತೆ ತೆರೆದಾಗಿನಿಂದ ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯ ಬರುತ್ತದೆ. ಇದರ ಬಡ್ಡಿ ದರ ಶೇ.7.40ರಷ್ಟನ್ನು ನಿಗದಿ ಮಾಡಲಾಗಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate)

ಈ ಯೋಜನೆಗೆ ಸೇರಲು ಬಯಸುವವರು ಕನಿಷ್ಠ 1000ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆಯು ಯಾವುದೇ ಮೊತ್ತವಾಗಿರಬಹುದು ಅದಕ್ಕೆ ಮಿತಿ ಇಲ್ಲ. ವಾರ್ಷಿಕ ಬಡ್ಡಿ ದರ ಶೇ.7.70ರಷ್ಟಿದೆ.

ಇದನ್ನೂ ಓದಿ: One Nation One Election ಕೇಂದ್ರ ಸಂಪುಟ ಗ್ರೀನ್​​ಸಿಗ್ನಲ್; ಮೋದಿ ಕಲ್ಪನೆಯ ಒಂದು ರಾಷ್ಟ್ರ ಒಂದು ಚುನಾವಣೆ ಲಾಭವೇನು?

ಪಿಪಿಎಫ್ (PPF)

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಒ೦ದು ವರ್ಷದಲ್ಲಿ ಕನಿಷ್ಠ ಮೊತ್ತ 500ರೂ. ಮತ್ತು ಗರಿಷ್ಟ 1,50,000 ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಶೇಕಡಾ 7.71ರಷ್ಟು ಬಡ್ಡಿ ದರ ಸಿಗುತ್ತದೆ.

ಕಿಸಾನ್ ವಿಕಾಸ್ ಪತ್ರ (Kisan Vikas Patra)

ಈ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ, ಕನಿಷ್ಠ 1000 ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ನೀವು ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಬಡ್ಡಿ ದರ 7.50 ಪ್ರತಿಶತದಷ್ಟಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

gold vijayaprabha news1

ಚಿನ್ನದ ಬೆಲೆ ಏರಿಕೆ; ಬೆಳ್ಳಿಯ ಬೆಲೆಯಲ್ಲಿ 500 ರೂ ಇಳಿಕೆ

By Vijayaprabha October 7, 2022
#ट्रेंडिंग हैशटैग:Kisan Vikas PatraMonthly Income SchemeNational Savings Time DepositPost Office Savings AccountPPFSavings Schemeಉಳಿತಾಯ ಯೋಜನೆಪಿಪಿಎಫ್ಪೋಸ್ಟ್ ಆಫೀಸ್ ಉಳಿತಾಯ ಖಾತೆಮಾಸಿಕ ಆದಾಯ ಯೋಜನೆರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ

Post navigation

Previous Previous post: WPL Mini Auction | WPL ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರ್ತಿಯರ ಸಂಪೂರ್ಣ ಪಟ್ಟಿ
Next Next post: BIG NEWS: ಭೀಕರ ಅಪಘಾತ: 6 ಜನರು ಸ್ಥಳದಲ್ಲೇ ಸಾವು!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By