B Y Vijayendra: ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಪೂರೈಸೋದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಯೇಂದ್ರ (B Y Vijayendra) ತಿರುಗೇಟು ನೀಡಿದ್ದಾರೆ
ಹೌದು, ಈ ಕುರಿತು ಟ್ವೀಟ್ ಮಾಡಿರುವ ವಿಜೇಯೇಂದ್ರ, ಸಿದ್ದರಾಮಯ್ಯ ಅವರೇ ಮೋದಿಜೀ ಅವರ ಸರ್ಕಾರದ ಸುಭದ್ರತೆ ಕುರಿತ ನಿಮ್ಮ ಗ್ರಹಿಕೆ ಹಾಗೂ ವ್ಯಾಖ್ಯಾನ “ನವಿಲು ಕುಣಿಯಿತೆಂದು ಕೆಂಭೂತ ಪುಕ್ಕ ತರೆದುಕೊಂಡಿದಂತಾಗಿದೆ”.
ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ: ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?, ಮಾಹಿತಿ ಇಲ್ಲಿದೆ
ಅಸ್ಥಿರಗೊಳ್ಳುತ್ತಿರುವ ನಿಮ್ಮ ಸ್ಥಾನದ ಸ್ಥಿತಿಯ ಲೆಕ್ಕಾಚಾರದಲ್ಲಿ ಮುಳುಗಿರುವ ನಿಮ್ಮ ಪಕ್ಷದ ಹಿತೈಷಿಗಳು “BioData” ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ವರಿಷ್ಠ ಮಂಡಳಿಯ ಕದ ತಟ್ಟುತ್ತಿರುವುದು ನಿತ್ಯ ಚರ್ಚೆಯಲ್ಲಿರುವ ಸುದ್ದಿಯಾಗಿದೆ, ಕೆಲವರು ಈ ಕುರಿತು ಮಾಧ್ಯಮಗಳ ಮೂಲಕ ಹಕ್ಕು ಮಂಡಿಸಿದ್ದಾರೆ.
ಇದರಿಂದ ವಿಚಲಿತಗೊಂಡಿರುವ ನೀವು ಮೇಲಿಂದ ಮೇಲೆ ನನ್ನ ಸ್ಥಾನ ಅಬಾಧಿತ, ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಲೇ ಇದ್ದೀರಿ, ಈ ಹೇಳಿಕೆ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಿರುವ ಅಸ್ಥಿರ ಸ್ಥಿತಿಯನ್ನು ಬಿಂಬಿಸುತ್ತದೆ. ಮೋದಿ ಜೀ ಸರ್ಕಾರದ ಅವಧಿಯ ಬಗ್ಗೆ ಚಿಂತಿಸುವ ಮೊದಲು ನಿಮ್ಮ ಸ್ಥಾನ ಹಾಗೂ ನಿಮ್ಮ ಸರ್ಕಾರದ ಭದ್ರತೆಯ ಬಗ್ಗೆ ಯೋಚಿಸಿ.
ಇದನ್ನೂ ಓದಿ: ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಚಂದನ್ ಪತ್ನಿ ಕವಿತಾ ; ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಚಂದನ್
ಮಾನ್ಯ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ಅವಧಿಯೂ ಪೂರೈಸುತ್ತದೆ, ಮತ್ತೊಂದು ಅವಧಿಗೂ ಚಾರಿತ್ರಿಕ ಗೆಲುವು ಸಾಧಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಂ1 ಸ್ಥಾನಕ್ಕೆ ತಂದು ನಿಲ್ಲಿಸಲಿದೆ. ಇದು ಶತಕೋಟಿ ಭಾರತೀಯರ ಆಶೋತ್ತರ ಹಾಗೂ ಸೂರ್ಯನ ಪ್ರಖರ ಬೆಳಕಿನಷ್ಟೇ ಸುಸ್ಪಷ್ಟ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ
ಮಾನ್ಯ @siddaramaiah ನವರೇ,
ಮೋದಿಜೀ ಅವರ ಸರ್ಕಾರದ ಸುಭದ್ರತೆ ಕುರಿತ ನಿಮ್ಮ ಗ್ರಹಿಕೆ ಹಾಗೂ ವ್ಯಾಖ್ಯಾನ “ನವಿಲು ಕುಣಿಯಿತೆಂದು ಕೆಂಭೂತ ಪುಕ್ಕ ತರೆದುಕೊಂಡಿದಂತಾಗಿದೆ”.
ಅಸ್ಥಿರಗೊಳ್ಳುತ್ತಿರುವ ನಿಮ್ಮ ಸ್ಥಾನದ ಸ್ಥಿತಿಯ ಲೆಕ್ಕಾಚಾರದಲ್ಲಿ ಮುಳುಗಿರುವ ನಿಮ್ಮ ಪಕ್ಷದ ಹಿತೈಷಿಗಳು “BioData” ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ… pic.twitter.com/p4IdybfYKg— Vijayendra Yediyurappa (@BYVijayendra) September 19, 2024