ಬಾಡಿಗೆದಾರರು ಮನೆ ಬಾಡಿಗೆ ಜೊತೆಗೆ ಶೇ.18ರಷ್ಟು ಜಿಎಸ್ಟಿ ಹಣವನ್ನೂ ಮಾಲೀಕರಿಗೆ ಪಾವತಿಸಬೇಕೆಂದು ಕೆಲ ಮಾಧ್ಯಮಗಳು ವರದಿ ಬಿತ್ತರಿಸಿದ್ದವು. ಇದರಿಂದ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಖಾಸಗಿ ವ್ಯಕ್ತಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದಲ್ಲಿ ಅಂಥವರಿಗೆ ಜಿಎಸ್ಟಿ ಅನ್ವಯವಾಗಲ್ಲ. ಒಂದು ವೇಳೆ ವ್ಯವಹಾರಕ್ಕಾಗಿ ಜಾಗ ಬಾಡಿಗೆ ನೀಡಿದ್ದರೆ ಜಿಎಸ್ಟಿ ಅನ್ವಯವಾಗಲಿದೆ ಎಂದಿದೆ.
ಯಾವ ಬಾಡಿಗೆದಾರರಿಗೆ 18% GST ಅನ್ವಯ :
ಜುಲೈ 18 ರಿಂದ ಜಾರಿಗೆ ಬಂದಿರುವ ನಿಯಮದ ಪ್ರಕಾರ, ವಸತಿ ಕಟ್ಟಡವನ್ನು ಬಾಡಿಗೆಗೆ ಪಡೆದು ವಾಣಿಜ್ಯ ಉದ್ದೇಶಗಳಿಗೆ ಬಳಸುವವರು ಇನ್ನು ಮುಂದೆ ಬಾಡಿಗೆಯೊಂದಿಗೆ 18% ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
ಹೊಸ ನಿಯಮಗಳು ಜಿಎಸ್‌ಟಿ ಅಡಿಯಲ್ಲಿ ತಮ್ಮ ವ್ಯಾಪಾರವನ್ನು ನೋಂದಾಯಿಸಿದ ಮತ್ತು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಕಟ್ಟಡದ ಮಾಲೀಕರು ಯಾವುದೇ ಹೆಚ್ಚುವರಿ ಜಿಎಸ್‌ಟಿ ಪಾವತಿಸಬೇಕಿಲ್ಲ.