ಚಿಕ್ಕಬಳ್ಳಾಪುರ: ಶಿವಮೊಗ್ಗದ ಹುಣುಸೂಡು ಕಲ್ಲು ಕ್ವಾರಿಯಲ್ಲಿ ಜಿಲಿಟಿನ್ ಸ್ಫೋಟ ದುರಂತದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಹೀರೆನಾಗವೇಲಿಯಲ್ಲಿ ಮತ್ತೊಂದು ಜಿಲೆಟಿನ್ ದುರಂತ ಸಂಭವಿಸಿದ್ದು, ಮಧ್ಯರಾತ್ರಿ ಸಂಭವಿಸಿದ ಜಿಲೆಟಿನ್ ಸ್ಫೋಟದಲ್ಲಿ 5 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಹತ್ತಾರು ಕಿಲೀಮೀಟರ್ ವರೆಗೂ ಭೂಮಿ ಕಂಪಿಸಿದ್ದು, ಬಾರಿ ಸ್ಪೋಟದಿಂದ ನೂರಾರು ಮೀಟರ್ ದೂರದವರೆಗೆ ಮೃತದೇಹಗಳು ಬಿದ್ದಿದ್ದು, ಇನ್ನೂ ಹಲವರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಪೋಟದಲ್ಲಿ ಮೃತಪಟ್ಟವರ ಪೈಕಿ ನಾಲ್ವರ ಮಾಹಿತಿ ಗೊತ್ತಾಗಿದ್ದು, ಸದ್ಯ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚಿಗೆ ಶಿವಮೊಗ್ಗದಲ್ಲಿ ಹುಣುಸೂಡು ಕ್ವಾರಿಯಲ್ಲಿ ಸಂಭವಿಸಿದ ಬಾರಿ ಸ್ಪೋಟದಲ್ಲಿ ಹಲವಾರು ಸಾವನ್ನಪ್ಪಿದ್ದರು, ಈ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಅವರು ತನಿಖೆಗೆ ಆದೇಶ ನೀಡಿದ್ದರು.