Cyber Awarness: ವಾಟ್ಸಾಪ್‌ನಲ್ಲಿ ಬರುವ ಮದುವೆ ಆಮಂತ್ರಣ ನಿಮ್ಮನ್ನು ವಂಚನೆಗೊಳಪಡಿಸಬಹುದು ಎಚ್ಚರ!

ಬೆಂಗಳೂರು: ಇತ್ತೀಚಿನ‌ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ಮಯವಾಗಿದ್ದು ಬಹುತೇಕ ಎಲ್ಲ ಕಡೆಗಳಲ್ಲಿ ಬಳಕೆಯಾಗುತ್ತಿದೆ. ಇದು ಎಷ್ಟರಮಟ್ಟಿಗೆ ಅನುಕೂಲಕರವಾಗಿದೆಯೋ ಅಷ್ಟೇ ವಂಚಕರಿಗೂ ವಂಚನೆಗೆ ಅವಕಾಶ ಒದಗಿಸುತ್ತಿದೆ.  ಈಗಂತೂ ಮದುವೆಗೆ ವಾಟ್ಸಾಪ್‌ನಲ್ಲಿ ಆಮಂತ್ರಣ ಕಳುಹಿಸೋದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚಿನ ಬ್ಯುಸಿ…

ಬೆಂಗಳೂರು: ಇತ್ತೀಚಿನ‌ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ಮಯವಾಗಿದ್ದು ಬಹುತೇಕ ಎಲ್ಲ ಕಡೆಗಳಲ್ಲಿ ಬಳಕೆಯಾಗುತ್ತಿದೆ. ಇದು ಎಷ್ಟರಮಟ್ಟಿಗೆ ಅನುಕೂಲಕರವಾಗಿದೆಯೋ ಅಷ್ಟೇ ವಂಚಕರಿಗೂ ವಂಚನೆಗೆ ಅವಕಾಶ ಒದಗಿಸುತ್ತಿದೆ. 

ಈಗಂತೂ ಮದುವೆಗೆ ವಾಟ್ಸಾಪ್‌ನಲ್ಲಿ ಆಮಂತ್ರಣ ಕಳುಹಿಸೋದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚಿನ ಬ್ಯುಸಿ ಲೈಫ್‌ನಲ್ಲಿ ಎಲ್ಲರನ್ನೂ ಭೇಟಿಯಾಗಿ ಆಮಂತ್ರಿಸುವುದು ಸಾಧ್ಯವಾಗದ ಕಾರಣಕ್ಕೆ ಜನರು ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ಆಮಂತ್ರಣ ಕಳುಹಿಸಿ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. 

ಆದರೆ ಇದನ್ನೇ ದಾಳವಾಗಿಸಿಕೊಂಡಿರುವ ಸೈಬರ್ ವಂಚಕರು ಮದುವೆ ಆಮಂತ್ರಣವನ್ನು ಬಳಸಿಕೊಂಡು ವಂಚನೆಯ ದಾರಿ ರೂಪಿಸಿದ್ದಾರೆ. ಮದುವೆ ಆಮಂತ್ರಣದಂತಹ ಫೈಲ್‌ಗಳನ್ನು ಕಳುಹಿಸುವ ವಂಚಕರು ಅದರ ಮೂಲಕ ಜನರ ವೈಯಕ್ತಿಕ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಇಂತಹ ಫೈಲ್‌ಗಳ ಮೂಲಕ ತಮ್ಮ ಮಾಲ್‌ವೇರ್‌ಗಳನ್ನು ಗುಪ್ತವಾಗಿ ನಿಮ್ಮ ಮೊಬೈಲ್‌ಗಳಿಗೆ ರವಾನಿಸಿ ಗೊತ್ತೇ ಆಗದ ರೀತಿಯಲ್ಲಿ ಬ್ಯಾಂಕ್ ಅಕೌಂಟ್, ಪಾಸ್‌ವರ್ಡ್‌ನಂತಹ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

Vijayaprabha Mobile App free

ಹೀಗಾಗಿ ಈ ಕುರಿತು ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ನಗರ ಪೊಲೀಸರು- ಡಿಜಿಟಲ್ ಮದುವೆ ಆಹ್ವಾನವು ನಿಮ್ಮನ್ನು ಬಲೆಗೆ ಸಿಲುಕಿಸದಂತೆ ನೋಡಿಕೊಳ್ಳಿ! ವೈಯಕ್ತಿಕ ಮಾಹಿತಿಯನ್ನು ಕದಿಯಲು ವಂಚಕರು ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ, ಜಾಣರಾಗಿರಿ. – ಅನುಮಾನಾಸ್ಪದ ಸಂದೇಶಗಳನ್ನು 1930 ಗೆ ವರದಿ ಮಾಡಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply