ಬೆಂಗಳೂರು: ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಖಾಲಿ ಇರುವ 1 ಉಪನ್ಯಾಸಕರು ಹುದ್ದೆಗೆ ಅರ್ಜಿ ಆಹ್ವಾನಿಲಾಗಿದೆ.
M.A. in Psychology/ M.A. in Journalism/ M.A. in Rural Development/ M.A. in Sociology/ M.Com/ B.Sc in Agriculture and allied subjects, /MSW /BBM /B.A /B.Sc with B.Ed ಅಥವಾ M.Ed ವಿದ್ಯಾರ್ಹತೆಯನ್ನು ಉಳ್ಳ ಅರ್ಹ ಯುವಕ/ ಯುವತಿಯರು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಬಲ್ಲವರು, ಟೈಪಿಂಗ್ ಮಾಡುವ ಪರಿಣಿತಿಯನ್ನು ಹೊಂದಿರಬೇಕು.
ಕಂಪ್ಯೂಟರ್‌ನಲ್ಲಿ MS Word, MS Excel ಹಾಗೂ MS Powerpoint ನಲ್ಲಿ ಪರಿಣಿತಿಯನ್ನು ಹೊಂದಿರುವ 22 ರಿಂದ 30 ವಯೋಮಾನದ ಯುವಕ/ ಯುವತಿಯರು ಅರ್ಜಿಯನ್ನು ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು ಡಿ.28 ರೊಳಗಾಗಿ ಇ-ಮೇಲ್ rudsetinlm@gmail.com ಮುಖಾಂತರ ಮಾತ್ರ ಕಳುಹಿಸಬಹುದು. ಪ್ರತಿ ತಿಂಗಳಿಗೆ ವೇತನ ರೂ. 30,000 ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9113880324, 9686172444 ನ್ನು ಸಂಪರ್ಕಿಸುವಂತೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.