Agarwood Business : ಕೆಜಿಗೆ 40 ಸಾವಿರ ಬೆಲೆ ಇರುವ ಅಗರ್ವುಡ್ ಬ್ಯುಸಿನೆಸ್ ಗೊತ್ತಾ?

Agarwood Business : ಗುಣಮಟ್ಟದ ಅಗರ್‌ವುಡ್‌ಗೆ ಪ್ರತಿ ಕಿಲೋಗೆ 40 ಸಾವಿರ ರೂಪಾಯಿ ಬೆಲೆ ಇದ್ದು, ಕೊಂಚ ಕಡಿಮೆ ಗುಣಮಟ್ಟದ ಅಗರ್ವುಡ್‌ಗೆ (Agarwood) ಪ್ರತಿ ಕಿಲೋಗೆ 25-30 ಸಾವಿರ ರೂ ಸಿಗುತ್ತದೆ. ಅಗರ್‌ವುಡ್ ತೆಗೆದ…

Agarwood Business

Agarwood Business : ಗುಣಮಟ್ಟದ ಅಗರ್‌ವುಡ್‌ಗೆ ಪ್ರತಿ ಕಿಲೋಗೆ 40 ಸಾವಿರ ರೂಪಾಯಿ ಬೆಲೆ ಇದ್ದು, ಕೊಂಚ ಕಡಿಮೆ ಗುಣಮಟ್ಟದ ಅಗರ್ವುಡ್‌ಗೆ (Agarwood) ಪ್ರತಿ ಕಿಲೋಗೆ 25-30 ಸಾವಿರ ರೂ ಸಿಗುತ್ತದೆ.

ಅಗರ್‌ವುಡ್ ತೆಗೆದ ಬಳಿಕ ಉಳಿಯುವ ಮರದ ತುಂಡು, ಪೌಡರ್ ಗೆ ಪ್ರತ್ಯೇಕ ದರ. ಕರ್ನಾಟಕದಲ್ಲಿ ವನದುರ್ಗ ಎನ್ನುವ ಸಂಸ್ಥೆಯ ಮೂಲಕ ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಅಗರ್ವುಡ್ ಮರಗಳನ್ನು ಬೆಳೆಸಲಾಗುತ್ತಿದೆ. ಸುಮಾರು 10 ಸಾವಿರ ಕೃಷಿಕರು ಇದರಲ್ಲಿ ತೊಡಗಿದ್ದು, 15 ಲಕ್ಷ ಮರಗಳನ್ನು ಬೆಳೆಯಲಾಗುತ್ತಿದೆ.

ಇದನ್ನೂ ಓದಿ: BPL card | ಬಿಪಿಎಲ್‌ ಕಾರ್ಡ್‌ದಾರರಿಗೆ ಭರ್ಜರಿ ಗುಡ್ ನ್ಯೂಸ್

Vijayaprabha Mobile App free

Agarwood Business : ಅಗರ್ವುಡ್ ಮರಗಳನ್ನು ಬೆಳೆಸುವುದು ಹೇಗೆ?

ಮರಗಳಿಗೆ ದ್ರವ್ಯ ಇಂಜೆಕ್ಟ್ ಮಾಡಿದ ಮೇಲೆ ಕನಿಷ್ಠ ಮೂರು ವರ್ಷಗಳವರೆಗೆ ಬಿಡಬೇಕು. ಆಗಷ್ಟೇ ಈ ಮರಗಳಲ್ಲಿ ಸುಗಂಧ ದ್ರವ್ಯದ ಅಂಶಗಳು ಸೇರಿಕೊಂಡು ಕಟಾವಿಗೆ ಸಿದ್ಧಗೊಳ್ಳುತ್ತದೆ. ಮರಗಳಲ್ಲಿ ಪೊಟರೆಯಾಕಾರದಲ್ಲಿ ಈ ಸುಗಂಧ ದ್ರವ್ಯಗಳು ಸಿಗುತ್ತಿದ್ದು ಅದರಿಂದ ಅಗರ್ ಬತ್ತಿ, ಸುಗಂಧ ಲೇಪನ, ಸುಗಂಧ ತೈಲಗಳನ್ನು ತಯಾರಿಸಲಾಗುತ್ತಿದೆ.

ಹಲವು ದೇಶಗಳಲ್ಲಿ ಈ ಸುಗಂಧ ದ್ರವ್ಯಗಳಿಗೆ ಭಾರೀ ಬೇಡಿಕೆಯಿದ್ದು, ಕಟಾವಿನ ಬಳಿಕ ಉತ್ತಮ ಗುಣಮಟ್ಟದ ಅಗರ್ವುಡ್ ಸೇರಿದಂತೆ ಮರದ ಎಲ್ಲಾ ಭಾಗಗಳಿಗೂ ಬೇಡಿಕೆಯಿದೆ.

ಇದನ್ನೂ ಓದಿ: Anila Bhagya Yojana : ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್; ಸಿಗುವ ಸೌಲಭ್ಯಗಳು, ಪಡೆಯುವ ವಿಧಾನ ಹೇಗೆ..?

Agarwood Business : ಅಗರ್ವುಡ್ ಮರಗಳನ್ನು ಎಲ್ಲಿ ಬೆಳೆಸಲಾಗುತ್ತದೆ..?

ದೂರದ ಅಸ್ಸಾಂ ರಾಜ್ಯದ ಕಾಡುಗಳಲ್ಲಿ ಬೆಳೆಯುವ ವಿಶೇಷ ಸುಗಂಧದ್ರವ್ಯದ ಮರಗಳು ಈಗ ಕರ್ನಾಟಕದ ಕೃಷಿಕರ ಪಾಲಿಗೂ ಲಾಭದಾಯಕವಾಗಿ ಬದಲಾಗುತ್ತಿದೆ.

ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಈ ಮರಗಳಿಗೆ ಸುಗಂಧ ದ್ರವ್ಯ ಉತ್ಪಾದಿಸಲು ಬೇಕಾದ ಅಂಶಗಳನ್ನು ಬಾಹ್ಯವಾಗಿ ಇಂಜೆಕ್ಟ್ ಮಾಡಲಾಗುತ್ತದೆ. ಮರ ನೆಟ್ಟು 8 ವರ್ಷಗಳಾದ ಬಳಿಕ ಈ ಅಂಶಗಳನ್ನು ಮರದ ಬುಡದಿಂದ ಹಿಡಿದು ಮೇಲ್ಭಾಗದವರೆಗೂ ಇಂಜೆಕ್ಟ್ ಮಾಡಿ, ಬಳಿಕ ಈ ಅಂಶಗಳು ಮರಕ್ಕೆ ಅಂಟಿಕೊಂಡು ಇಡೀ ಮರವೇ ಸುಗಂಧ ದ್ರವ್ಯದ ಗಣಿಯಾಗಿ ಬದಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.