Ration card : ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡುವ ಕೊನೆ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.ಸೆಪ್ಟೆಂಬರ್ 30 ರೊಳಗೆ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡಬೇಕು. ಆದ್ದರಿಂದ ಇನ್ನೂ ತಮ್ಮ ದಾಖಲೆಗಳನ್ನು ಲಿಂಕ್ ಮಾಡದ ಜನರಿಗೆ ಸಮಯವಿದೆ.
ಇನ್ನೂ ತಮ್ಮ ದಾಖಲೆಗಳನ್ನು ಲಿಂಕ್ ಮಾಡದ ಜನರು ಸೆಪ್ಟೆಂಬರ್ 30 ರೊಳಗೆ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಒಂದು ವೇಳೆ ಲಿಂಕ್ ಮಾಡದಿದ್ದರೆ ಸೆಪ್ಟೆಂಬರ್ 30 ರ ಕೊನೆಯ ದಿನಾಂಕದ ನಂತರ ತಮ್ಮ ಪಡಿತರ ಚೀಟಿಗೆ (Ration card) ಆಧಾರ್ ಅನ್ನು ಲಿಂಕ್ ಮಾಡಲು ಯಾರಿಗೂ ಅನುಮತಿಸಲಾಗುವುದಿಲ್ಲ ಎನ್ನಲಾಗಿದೆ.
ಇದನ್ನು ಓದಿ: ಉಚಿತ ಯೋಜನೆಗೆ ಈ ಕಾರ್ಡ್ ಕಡ್ಡಾಯ; ಇವರಿಗೆ ಸಿಗುತ್ತೆ ಮಾಸಿಕ ಪಿಂಚಣಿ 3,000 ರೂ!
Ration card : ಈ ವೆಬ್‌ಸೈಟ್‌ನಿಂದ ರೇಷನ್‌ಕಾರ್ಡ್ ಆಧಾರ್ ಲಿಂಕ್ ಮಾಡುವುದು ಹೇಗೆ?
ರಾಜ್ಯ ಪಿಡಿಎಸ್ ವೆಬ್ಸೈಟ್ (ಆಹಾರ ಇಲಾಖೆ) ಮೂಲಕವೂ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಣೆ ಮಾಡಬಹುದು.
- ಹೌದು, ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್ ಅಧಿಕೃತ https://ahara.kar.nic.in/ ವೆಬ್ಸೈಟ್ ಗೆ ಹೋಗಿ.
- ನಂತರ ಈ ಸೇವೆಗಳು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ಈ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿದರೆ ಕೆಳಗೆ ಕಾಣಿಸುವ ಯುಐಡಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಎಂಟ್ರಿ ಮಾಡಬೇಕು. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರುತ್ತದೆ ಆ ಒಟಿಪಿ ನಮೂದಿಸಿ
- ನಂತರ ನಿಮ್ಮ ಪಡಿತರ ಚೀಟಿ ಆಧಾರ್ ಕಾರ್ಡ್ ಲಿಂಕ್ ಲಿಂಕ್ ಆಗಿದೆ ಎಂದು ಬರುತ್ತದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |
ಇದನ್ನು ಓದಿ: ಜುಲೈ 19ರಂದು ಗೃಹಲಕ್ಷ್ಮೀ ಯೋಜನೆ ಜಾರಿ; ಈ ಯೋಜನೆಗೆ ಯಾರು ಅರ್ಹರು? ನಿಮ್ಮ ಮನೆ ಬಾಗಲಿಗೆ ಬರ್ತಾರೆ ಇವ್ರು !