ರಾಯಚೂರು: ಅನೈತಿಕ ಸಂಬಂಧ ಶಂಕಿಸಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಸ್ವತಃ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ರಾಯಚೂರು ಜಿಲ್ಲೆಯ ಸಮೀಪದ ಯರಜಂತಿ ಗ್ರಾಮದಲ್ಲಿ ನಡೆದಿದೆ. ಇನ್ನು ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ತಿಮ್ಮಯ ಮಲಕಸಿ (45) ಬಂಧಿತ ಆರೋಪಿಯಾಗಿದ್ದಾನೆ.
ದನಕರುಗಳಿಗೆ ಮೇವು ಹಾಕುವ ವಿಷಯದಲ್ಲಿ ತಂದೆ-ತಾಯಿ ಜತೆ ಬಾಲಕಿ ವಾಗ್ವಾದ ನಡೆಸಿದ್ದಲ್ಲದೇ, ರಾತ್ರಿ ಹೇಳದೆ ಕೇಳದೆ ಬೇರೆಯವರ ಮನೆಗೆ ಹೋಗಿ ಅಲ್ಲಿಯೇ ಇದ್ದು ಮರುದಿನ ಮನೆಗೆ ಬಂದಿದ್ದಾಳೆ. ಸದಾ ಆಕೆಯನ್ನು ಅನುಮಾನದಿಂದ ನೋಡುತ್ತಿದ್ದ ತಂದೆ, ಮರುದಿನ ತನ್ನ ಮಗಳು ಬೆಳಗ್ಗೆ ಪಾತ್ರೆ ತೊಳೆಯುವ ಕೆಲಸದಲ್ಲಿ ನಿರತಳಾಗಿದ್ದಾಗ, ಹಿಂದಿನಿಂದ ಬಂದು ಕೊಡಲಿಯಿಂದ ಬಲವಾಗಿ ಬೀಸಿ ಕೊಚ್ಚಿ ಕೊಂದಿದ್ದಾನೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.