ಬಿಹಾರ್‌ನ ರೈತನ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 6,833 ಕೋಟಿ. ರೂ.ಜಮಾ ಆಗಿದೆ. ಬಿಹಾರದ ಲಖಿಸರಾಯ್ ಊರಿನ ರೈತ ಸುಮನ್ ಕುಮಾರ್ ಎಂಬವರ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ ಬರೋಬ್ಬರಿ ₹6,833 ಕೋಟಿ ಹಣ ಜಮೆ ಆಗಿದೆ.
ಸುಮನ್ ಷೇರು ವ್ಯವಹಾರ ನಡೆಸುತ್ತಿದ್ದು, ಕೊಟಕ್ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ಡಿಮ್ಯಾಟ್ ಅಕೌಂಟ್ ಹೊಂದಿದ್ದಾರೆ. ಇಷ್ಟೊಂದು ಹಣ ಜಮೆ ಆಗಿರುವುದಕ್ಕೆ ಖುದ್ದು ಸುಮನ್ ಆಶ್ಟರ್ಯ ವ್ಯಕ್ತಪಡಿಸಿದ್ದಾರೆ. ವಾರ ಕಳೆದರೂ ಖಾತೆಯಲ್ಲಿ ಈ ಹಣ ಹಾಗೆಯೇ ಇದೆ. ಇದು ಯಾರ ಹಣ? ಎಲ್ಲಿಂದ ಬಂತು ಎಂದು ಗೊತ್ತಾಗದೆ ಸುಮನ್ ಗೊಂದಲಕ್ಕೆ ಸಿಲುಕಿದ್ದಾರೆ.
ಈಗ ಮಾಹಿತಿ ಹಕ್ಕುವಿನಡಿ ವಿವರ ಕೇಳಿದ್ದು, ಈ ಹಣ ಬ್ಯಾಂಕ್‌ಗೆ ಹೇಗೆ ಬಂತು, ಎಲ್ಲಿಂದ ಬಂತು ಎಂಬುದು ತನಿಖೆಯಿಂದ ತಿಳಿಯಬೇಕಷ್ಟೇ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.