ಬಳ್ಳಾರಿ: ಬಳ್ಳಾರಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ “ಸಪ್ತಪದಿ ಸರಳ ಸಾಮೂಹಿಕ ವಿವಾಹ” ನಡೆಸಲು ಉದ್ದೇಶಿಸಲಾಗಿದ್ದು, ಏಪ್ರಿಲ್ 19 ರಿಂದ ಜುಲೈ 7ರವರೆಗೆ ವಿವಾಹ ಕಾರ್ಯಕ್ರಮ ನಡೆಯಲಿದ್ದು ಸಪ್ತಪದಿ ತುಳಿಯುವ ವಧು ವರರಿಗೆ 55,000 ರೂ ಪ್ರೋತ್ಸಾಹಧನ ನೀಡಲಾಗುತ್ತದೆ.
ಬಳ್ಳಾರಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವತಿಯಿಂದ ಈ ವಿವಾಹ ಕಾರ್ಯಕ್ರಮದಲ್ಲಿ ವರನಿಗೆ ಪ್ರೋತ್ಸಾಹಧನವಾಗಿ 5 ಸಾವಿರ, ವಧುವಿಗೆ ಪ್ರೋತ್ಸಾಹಧನವಾಗಿ 10 ಸಾವಿರ ಮತ್ತು ದೇವಸ್ಥಾನದ ವತಿಯಿಂದ ವಧುವಿಗೆ 40 ಸಾವಿರ ರೂ.ಮೌಲ್ಯದ ಚಿನ್ನದ ತಾಳಿ, 2 ಗುಂಡು ಸೇರಿ ವಧು-ವರರಿಗೆ ಒಟ್ಟು ರೂ.55 ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಬಳ್ಳಾರಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಏಪ್ರಿಲ್ 19 ರಿಂದ ಜುಲೈ 7ರವರೆಗೆ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಮೊನ್ನೆಯಷ್ಟೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ವಿವಾಹ ಕಾರ್ಯಕ್ರಮದಲ್ಲಿ ವಧು ವರರಿಗೆ 55,000 ರೂ ಪ್ರೋತ್ಸಾಹಧನ ನೀಡುವುದಾಗಿ ಹೇಳಿತ್ತು.
ಇದನ್ನು ಓದಿ: ಶುಭ ಸುದ್ದಿ: ಸಪ್ತಪದಿ ತುಳಿಯುವ ವಧುವರರಿಗೆ 55,000 ರೂ ಪ್ರೋತ್ಸಾಹಧನ!