ನಿಮ್ಮ ಖಾತೆಗೆ ₹3,000; ಜೂನ್ 5 ಕೊನೆ ದಿನ!

ಬೆಂಗಳೂರು: ದೇಶದೆಲ್ಲೆಡೆ ಕರೋನ ಅಬ್ಬರ ಜೋರಾಗಿದ್ದು 2ನೇ ಅಲೆಯ ಹಿನ್ನಲೆ, ಇದರ ಕಡಿವಾಣಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಕೆಲಸವಿಲ್ಲದೇ ಆರ್ಥಿಕವಾಗಿ…

money vijayaprabha news

ಬೆಂಗಳೂರು: ದೇಶದೆಲ್ಲೆಡೆ ಕರೋನ ಅಬ್ಬರ ಜೋರಾಗಿದ್ದು 2ನೇ ಅಲೆಯ ಹಿನ್ನಲೆ, ಇದರ ಕಡಿವಾಣಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ.

ಇದರಿಂದ ಕೆಲಸವಿಲ್ಲದೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ರಾಜ್ಯ ಸರ್ಕಾರ ಸಹಾಯಧನ ಘೋಷಣೆ ಮಾಡಿದ್ದು, ಇದನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಕಲಾವಿದರು ‘ಸೇವಾ ಸಿಂಧು’ ಪೋರ್ಟಲ್ https://sevasindhu.karnataka.gov.in/ಗೆ ಭೇಟಿ ನೀಡಿ, ಜೂನ್ 5ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಕಲಾಕ್ಷೇತ್ರದಲ್ಲಿ ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿದ ಕಲಾವಿದರಿಗೆ ₹3,000 ಸಹಾಯಧನ ನೀಡಲಾಗುತ್ತದೆ. ಇನ್ನು, ಕನ್ನಡ & ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ ಅರ್ಹರಿರುವುದಿಲ್ಲ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.