ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆಯೇ? ಈಗಿನಿಂದಲೇ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ ನಿಮಗೊಂದು ಸಿಹಿಸುದ್ದಿ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನಲ್ಲಿ ಕ್ಯಾಲಿಬ್ಯಾಕ್ ಕೊಡುಗೆಗಳು ಸಿಲಿಂಡರ್ ಬುಕಿಂಗ್‌ನಲ್ಲಿ ಲಭ್ಯವಿದೆ. ಇದಕ್ಕೋಸ್ಕರ ನೀವು ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ. ಮನೆಯಿಂದಲೇ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡುವವರು ಇಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ ಕೂಡ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಇದಕ್ಕಾಗಿ ನೀವು ಅಮೆಜಾನ್ ಅಪ್ ನಲ್ಲಿ ಪೇ ಬಿಲ್ಸ್ ಎಂಬ ಆಯ್ಕೆ ಇದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಗ್ಯಾಸ್ ಸಿಲಿಂಡರ್ ಬುಕಿಂಗ್ ಆಯ್ಕೆಯನ್ನು ಆರಿಸಿ. ನಂತರ ನಿಮ್ಮ ಗ್ಯಾಸ್ ಆಪರೇಟರ್ ಅನ್ನು ಆಯ್ಕೆ ಮಾಡಿ. ನಂತರ ಎಲ್ಪಿಜಿ ಐಡಿ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಈಗ ಅಮೆಜಾನ್ ಪೇ ಮೂಲಕ ಬಿಲ್ ಪಾವತಿಸಿ.
ಈಗ ನಿಮಗೆ ರೂ .50 ಕ್ಯಾಶ್‌ಬ್ಯಾಕ್ ಸಿಗುತ್ತದೆ. ಆದರೆ ಗ್ಯಾಸ್ ಸಿಲಿಂಡರ್‌ಗಳನ್ನು ಮೊದಲ ಬಾರಿಗೆ ಬುಕ್ ಮಾಡುವವರೆಗೆ ಈ ಕೊಡುಗೆ ಅನ್ವಹಿಸುತ್ತದೆ. ಗ್ಯಾಸ್ ಸಿಲಿಂಡರ್ ಬುಕಿಂಗ್ ಕ್ಯಾಶ್‌ಬ್ಯಾಕ್ ಆಫರ್ ಅಮೆಜಾನ್‌ನಲ್ಲಿ ಮಾತ್ರವಲ್ಲದೆ ಪ್ರಮುಖ ಡಿಜಿಟಲ್ ವ್ಯಾಲೆಟ್ ಕಂಪನಿ ಪೇಟಿಎಂನಲ್ಲಿಯೂ ಸಹ ಲಭ್ಯವಿದೆ.
ನೀವು Paytm ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ನಿಮಗೆ 500 ರೂ.ಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಇದಕ್ಕಾಗಿ ನೀವು Paytm ಗೆ ಹೋಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕಾಗುತ್ತದೆ. ರೀಚಾರ್ಜ್ ಮತ್ತು ಪೇ ಬಿಲ್ಸ್ ಆಯ್ಕೆಗೆ ಹೋಗಿ ಸಿಲಿಂಡರ್ ಅನ್ನು ಬುಕ್ ಮಾಡಿ. ಇಲ್ಲಿ ಫಸ್ಟ್‌ಎಲ್‌ಪಿಜಿ ಎಂಬ ಪ್ರೊಮೊ ಕೋಡ್ ಬಳಸಬೇಕು. ಆಗ ನಿಮಗೆ ಕ್ಯಾಶ್‌ಬ್ಯಾಕ್ ಸಿಗುತ್ತದೆ. Paytm ನಲ್ಲಿ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಅನ್ನು ಕಾಯ್ದಿರಿಸುವವರಿಗೂ ಇದು ಅನ್ವಯಿಸುತ್ತದೆ. ಆಫರ್ ಡಿಸೆಂಬರ್ 31 ರವರೆಗೆ ಲಭ್ಯವಿದೆ.
ಕ್ಯಾಶ್‌ಬ್ಯಾಕ್ ಪೇಟಿಎಂ ಮತ್ತು ಅಮೆಜಾನ್‌ನಲ್ಲಿ ಮಾತ್ರವಲ್ಲದೆ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಆ್ಯಪ್ ಮೂಲಕವೂ ಲಭ್ಯವಿದೆ. ನೀವು ಭಾರತ, ಎಚ್‌ಪಿ, ಇಂಡಿಯನ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ನಿಮಗೆ 30 ರೂ. ಗಳ ಕ್ಯಾಶ್ ಬ್ಯಾಕ್ ಸಿಗುತ್ತದೆ. ನೀವು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಕೂಡ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
ಇದನ್ನು ಓದಿ: ಖ್ಯಾತ ತಮಿಳು ಸೀರಿಯಲ್ ನಟಿ ವಿ ಜೆ ಚಿತ್ರ ಆತ್ಮಹತ್ಯೆ; ಅನುಮಾನಗಳಿಗೆ ಕಾರಣವಾದ ನಟಿಯ ಸಾವು!