ಖ್ಯಾತ ತಮಿಳು ಸೀರಿಯಲ್ ನಟಿ ವಿ ಜೆ ಚಿತ್ರ ಆತ್ಮಹತ್ಯೆ; ಅನುಮಾನಗಳಿಗೆ ಕಾರಣವಾದ ನಟಿಯ ಸಾವು!

ಚೆನ್ನೈ : ಪಾಂಡ್ಯನ್ ಸ್ಟೋರ್ಸ್ ನಲ್ಲಿನ ಪಾತ್ರಕ್ಕಾಗಿ ಜನಪ್ರೀಯತೆ ಗಳಿಸಿದ್ದ ಖ್ಯಾತ ತಮಿಳು ನಟಿ ವಿ ಜೆ ಚಿತ್ರ (28) ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ನಟಿ ವಿ ಜೆ ಚಿತ್ರ ಅವರು ಚೆನ್ನೈನ ಹೋಟೆಲ್‌ವೊಂದರಲ್ಲಿ…

v j chitra vijayaprabha

ಚೆನ್ನೈ : ಪಾಂಡ್ಯನ್ ಸ್ಟೋರ್ಸ್ ನಲ್ಲಿನ ಪಾತ್ರಕ್ಕಾಗಿ ಜನಪ್ರೀಯತೆ ಗಳಿಸಿದ್ದ ಖ್ಯಾತ ತಮಿಳು ನಟಿ ವಿ ಜೆ ಚಿತ್ರ (28) ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ನಟಿ ವಿ ಜೆ ಚಿತ್ರ ಅವರು ಚೆನ್ನೈನ ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ನಟಿ ವಿಜೆ ಚಿತ್ರ ಅವರು ಕೆಲವು ದಿನಗಳ ಹಿಂದೆ ಉದ್ಯಮಿ ಹೇಮಂತ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆದರೆ, ಉದ್ಯಮಿ ಹೇಮಂತ್ ತಂಗಿದ್ದ ಹೋಟೆಲ್ ಕೋಣೆಯಲ್ಲಿ ನಟಿ ವಿ ಜೆ ಚಿತ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬುಧವಾರ ಬೆಳಿಗ್ಗೆ ಸ್ನಾನ ಮಾಡಿ ಬರುತ್ತೇನೆ ಎಂದು ಹೋದ ವಿ ಜೆ ಚಿತ್ರ ಎಷ್ಟು ಹೊತ್ತಾದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಉದ್ಯಮಿ ಹೇಮಂತ್ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಹೋಟೆಲ್ ಸಿಬ್ಬಂದಿ ನಕಲಿ ಕೀಲಿಯೊಂದಿಗೆ ಕೋಣೆಯ ಬಾಗಿಲು ತೆರೆದು ನೋಡಿದಾಗ ಲಿವಿಂಗ್ ರೂಮಿನಲ್ಲಿ ನಟಿ ವಿ ಜೆ ಚಿತ್ರ ಅವರು ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಾಣಿಸಿದ್ದಾರೆ. 28 ವರ್ಷ ವಯಸ್ಸಿನ ವಿ ಜೆ ಚಿತ್ರ ಅವರ ಆತ್ಮಹತ್ಯೆಯಿಂದ ತಮಿಳು ಚಿತ್ರೋದ್ಯಮ ಆಘಾತಕ್ಕೊಳಗಾಗಿದೆ. ವಿ ಜೆ ಚಿತ್ರ ಅವರು ಜನಪ್ರಿಯ ಟಿವಿ ಶೋ ‘ಪಾಂಡ್ಯನ್ ಸ್ಟೋರ್ಸ್’ ನಲ್ಲಿನ ಪಾತ್ರಕ್ಕಾಗಿ ಜನಪ್ರೀಯತೆ ಗಳಿಸಿದ್ದರು. ವಿ ಜೆ ಚಿತ್ರ ಅವರ ಸಾವಿಗೆ ಕಾರಣ ಯಾವುದೇ ಕರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.