ದಾವಣಗೆರೆ: ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ ಹಾಗೂ ಮಗುವಿಗೆ ಕ್ರೈನ್ ಡಿಕ್ಕಿಯಾದ ಪರಿಣಾಮ ಇಬ್ಬರೂ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ.
ಸಲೀಂ (10) ಹಾಗೂ ಮಹಿಳೆ ರುಕ್ಸಾನಾ (40) ಮೃತಪಟ್ಟ ತಾಯಿ, ಮಗು ಎಂದು ತಿಳಿದು ಬಂದಿದೆ. ನಲ್ಲೂರು ಗ್ರಾಮದಲ್ಲಿ ವೀಲ್ ಚೇರ್‌ನಲ್ಲಿ ರಸ್ತೆ ಬದಿ ತಾಯಿ ರುಕ್ಸಾನಾ ಹಾಗೂ ಮಗು ಸಲೀಂ ಇಬ್ಬರು ಭಿಕ್ಷೆ ಬೇಡುತ್ತಿದ್ದ ವೇಳೆ ಚನ್ನಗಿರಿ ಮಾರ್ಗವಾಗಿ ಬರುತ್ತಿದ್ದ ಕ್ರೈನ್ ಜೊರಾಗಿ ಡಿಕ್ಕಿಯಾಗಿದ್ದು, ಇದರ ಪರಿಣಾಮ ತಾಯಿ ಹಾಗು ಮಗು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.