PM Kisan Yojana : ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ₹6,000 ಸಹಾಯಧನವನ್ನು ಮೂರು ಕಂತುಗಳಲ್ಲಿ ₹2,000 ರೂಪಾಯಿಗಳಂತೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ.
ಈಗ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಈ ಬಾರಿ 20ನೇ ಕಂತಿನ ಹಣವನ್ನು ಜೂನ್ 22 ರಂದು ರೈತರ ಖಾತೆಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಹಿಂದೆ, ಫೆಬ್ರವರಿ 24ರಂದು 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.
E-KYC ಮಾಡಿದ ರೈತರಿಗೆ ಮಾತ್ರ PM ಕಿಸಾನ್ ಹಣ ಜಮೆ
ಇನ್ನು, ಪಿಎಂ ಕಿಸಾನ್ ಯೋಜನೆಯ ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳಿಗೆ ಈ ಬಾರಿ ಹಣ ತಲುಪುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಈ ಕಾರಣದಿಂದಾಗಿ, ಈ ಅನುದಾನವನ್ನು ಪಡೆಯಲು ರೈತರು ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರೈಸುವಂತೆ ಕೇಂದ್ರ ಸರ್ಕಾರ ರೈತರಿಗೆ ಸೂಚಿಸಿದೆ. ಇತ್ತೀಚೆಗೆ 20,000ಕ್ಕೂ ಹೆಚ್ಚು ಹೊಸ ಫಲಾನುಭವಿಗಳನ್ನು ಯೋಜನೆಗೆ ಸೇರಿಸಲಾಗಿದೆ.