Israel Vs Iran War | ಇಸ್ರೇಲ್ Vs ಇರಾನ್ ಯುದ್ಧ ಅಮೆರಿಕ ಪ್ರವೇಶ, ಜಗತ್ತಿನ ಮೇಲಾಗುವ ಪರಿಣಾಮಗಳು

Israel Vs Iran War । 10 ದಿನಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ಯುದ್ಧದಲ್ಲಿ ಇದೀಗ ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದೆ. ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಪೃಹಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕ…

Israel Vs Iran War

Israel Vs Iran War । 10 ದಿನಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ಯುದ್ಧದಲ್ಲಿ ಇದೀಗ ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದೆ. ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಪೃಹಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ. ಇರಾನ್ ಈ ದಾಳಿಯನ್ನು ಖಂಡಿಸಿದ್ದು, ಪ್ರತೀಕಾರದ ಎಚ್ಚರಿಕೆ ನೀಡಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಬೆಳವಣಿಗೆಯಿಂದ ಜಗತ್ತಿನ ಮೇಲಾಗುವ ಪರಿಣಾಮಗಳ ಕುರಿತ ಮಾಹಿತಿ ಇಲ್ಲಿದೆ.

ಭೌಗೋಳಿಕ ರಾಜಕೀಯ ಪರಿಣಾಮ

Israel Vs Iran War vijayaprabha news

ಇಸ್ರೇಲ್ ಮತ್ತು ಇರಾನ್ ಯುದ್ಧದಲ್ಲಿ ಅಮೆರಿಕ ಪ್ರವೇಶಿಸಿದ್ದರಿ೦ದ ವಿಶ್ವದ ಬಹುತೇಕ ರಾಷ್ಟ್ರಗಳು ವಿಭಜನೆಯಾಗಬಹುದು. ಯುಕೆ, ಜರ್ಮನಿ, ಫ್ರಾನ್ಸ್ ಆಸ್ಟ್ರೇಲಿಯಾ, ಜಪಾನ್ ದೇಶಗಳು ಅಮೆರಿಕ ಮತ್ತು ಇಸ್ರೇಲ್‌ಗೆ ಬ೦ಬಲ ನೀಡಬಹುದು. ಚೀನಾ, ರಷ್ಯಾ, ವೆನೆಜುವೆಲಾ, ಕ್ಯೂಬಾ ಮತ್ತು ಬಹುಶಃ ಕೆಲವು ಅರಬ್ ರಾಷ್ಟ್ರಗಳು ಇರಾನ್ ಗೆ ಬೆಂಬಲ ನೀಡಬಹುದು. ಶಾಂತಿಯ ಸಂದೇಶ ನೀಡಿದರೂ ಯುಎನ್ ಉದ್ದೇಶಗಳಿಗೆ ವಿರೋಧವಾಗಿರುವುದರಿಂದ ಭಾರೀ ಗೊಂದಲ ಉಂಟಾಗಿದೆ.

Vijayaprabha Mobile App free

ಆರ್ಥಿಕ ಪರಿಣಾಮ

ಯುದ್ಧ ಭೀತಿಯಿ೦ದ ವಿಶ್ವದ ಷೇರು ಮಾರುಕಟ್ಟೆಗಳು ಕುಸಿಯಬಹುದು. ಹೂಡಿಕೆದಾರರ ವಿಶ್ವಾಸ ಕುಸಿದಿದ್ದು ಜಾಗತಿಕ ಸೂಚ್ಯಂಕಗಳು (ಎಸ್ & ಪಿ, ನಿಕ್ಕಿ, ಎಫ್‌ಟಿಎಸ್‌ ಇ) ಕೆಂಪು ಬಣ್ಣದಲ್ಲಿವೆ. ಡಾಲರ್ ದುಬಾರಿಯಾಗುತ್ತಿದ್ದು, ಅಮೆರಿಕ ಸೇರಿದಂತೆ ಅನೇಕ ದೇಶಗಳ ಆಮದು ವೆಚ್ಚಗಳು ಹೆಚ್ಚಾಗಲಿವೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ $120 ಕ್ಕೆ ತಲುಪಿದ್ದು, ಜಾಗತಿಕ ಹಣದುಬ್ಬರ, ಸಾರಿಗೆ ವೆಚ್ಚಗಳು ಮತ್ತು ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ.

ಭದ್ರತಾ ಪರಿಣಾಮ

ಇರಾನ್ ಅಥವಾ ಅದರ ಮೈತ್ರಿಕ ರಾಷ್ಟ್ರಗಳು ಅಮೆರಿಕದ ನಾಗರಿಕ ಮೂಲಸೌಕರ್ಯಗಳ ಮೇಲೆ ಸೈಬ‌ರ್ ದಾಳಿ ನಡೆಸಬಹುದು. ಯುರೋಪ್, ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಅನೇಕ ರಾಷ್ಟ್ರಗಳು ಉಗ್ರ ದಾಳಿಗಳಿಂದ ಎಚ್ಚರದಲ್ಲಿವೆ. ಇದರಲ್ಲಿ ಹಿಜ್ಜುಲ್ಲಾ, ಹಮಾಸ್‌ ಮತ್ತು ಯೆಮನ್‌ನ ಹೂತಿ ಗುಂಪುಗಳು ಬಲವಾಗಿ ಸಕ್ರಿಯವಾಗಿವೆ. ಇರಾಕ್, ಅಫ್ಘಾನಿಸ್ತಾನ ಮತ್ತು ಗಾಜಾ ಪರೋಕ್ಷ ಯುದ್ಧಕ್ಕೆ ಹೊಸ ಯುದ್ಧಭೂಮಿಗಳಾಗಬಹುದು.

ಮಾನವೀಯ ಬಿಕ್ಕಟ್ಟು

ಇರಾನ್ ಅಥವಾ ಇಸ್ರೇಲ್‌ನಲ್ಲಿನ ಲಕ್ಷಾಂತರ ನಾಗರಿಕರು ಶರಣಾರ್ಥಿಗಳಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ, ಟರ್ಕಿ, ಯುರೋಪ್ ಕಡೆ ಹೋಗುವ ಸಾಧ್ಯತೆ ಇದೆ. ಇದು ಟರ್ಕಿ, ಯುರೋಪ್ ಮತ್ತು ಮಧ್ಯ ಏಷ್ಯಾಕ್ಕೆ ನಿರಾಶ್ರಿತರ ಅಲೆಯನ್ನು ಪ್ರಚೋದಿಸುತ್ತದೆ. ಯುದ್ಧ ನಿಲ್ಲಿಸಲು ಯುಎನ್ ಮತ್ತು ರೆಡ್ ಕ್ರಾಸ್‌ ಸಂಸ್ಥೆಗಳ ಶಾಂತಿ ಸಭೆಗಳ ಅವಶ್ಯಕತೆ ಇದೆ. UNHCR ಮತ್ತು ರೆಡ್ ಕ್ರಾಸ್ ಈಗಾಗಲೇ ಹಣಕಾಸಿನ ಕೊರತೆಯನ್ನು ವರದಿ ಮಾಡುತ್ತಿವೆ.

ಪರಮಾಣು ಸೋರಿಕೆ ಭಯಗಳು

ಇರಾನ್ ಪರಮಾಣು ಒಪ್ಪಂದಗಳಿಂದ (ಜೆಸಿಪಿಒಎ) ಸಂಪೂರ್ಣವಾಗಿ ಹಿಂದೆ ಸರಿಯಬಹುದು. ತಡೆಗಟ್ಟುವಿಕೆಯಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ವೇಗಗೊಳಿಸಬಹುದು. ಇಸ್ರೇಲ್ ಇತರ ಗುಪ್ತ ಪರಮಾಣು ತಾಣಗಳ ಮೇಲೆ ಪೂರ್ವಭಾವಿಯಾಗಿ ದಾಳಿ ಮಾಡಬಹುದು. ಪರಮಾಣು ಸೌಲಭ್ಯಗಳು ಹಾನಿಗೊಳಗಾಗಿ ಸೋರಿಕೆಯಾದರೆ “ಮಧ್ಯಪ್ರಾಚ್ಯ ಚೆರ್ನೋಬಿಲ್” ಸನ್ನಿವೇಶದ ಭಯ ಉಂಟಾಗಬಹುದು.

ಜಾಗತಿಕ ಯುದ್ಧದ ಮುನ್ಸೂಚನೆ

ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕದ ಪ್ರವೇಶವು ಜಾಗತಿಕ ಶಾಂತಿ ಪ್ರಯತ್ನಗಳಿಗೆ ಹಿಂತಿರುಗಿಸಲಾಗದ ಹಂತವಾಗಿದೆ. ಈ ಯುದ್ಧದ ವಿಸ್ತಾರವು ಕೇವಲ ಇರಾನ್-ಇಸ್ರೇಲ್ ನಡುವೆ ಇರುವ ರಾಜಕೀಯ ಸಮಸ್ಯೆಗಷ್ಟೇ ಸೀಮಿತವಿಲ್ಲ. ಅಮೆರಿಕದ ಪ್ರವೇಶದಿಂದ ಇದು ಮೂರನೇ ಜಾಗತಿಕ ಯುದ್ಧದ ಮುನ್ಸೂಚನೆ ಎ೦ಬ೦ತೆ ತೋರುತ್ತಿದೆ. ಪ್ರಪಂಚದ ನಿಶ್ಯಬ್ದತೆ ಇನ್ನು ಹೆಚ್ಚು ದಿನ ಇರದು ಎ೦ದೇ ತೋರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.