ಅನ್ನದಾತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ಅವರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಇವುಗಳಲ್ಲಿ ಒಂದು ಫಾರ್ಮರ್ ಪ್ರಡ್ಯೂಸರ್ ಆರ್ಗನೈಜೇಷನ್ (ಎಫ್‌ಪಿಒ). ಇದರಲ್ಲಿ ಸೇರಿದರೆ ಕೇಂದ್ರ 15 ಲಕ್ಷ ರೂ ಸಿಗುತ್ತದೆ.
ಈ ಯೋಜನೆಯಡಿ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಮೋದಿ ಸರ್ಕಾರ ರೈತರಿಗೆ 15 ಲಕ್ಷ ರೂ ಆರ್ಥಿಕ ಸಹಾಯ ನೀಡುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಆದರೆ ಯೋಜನೆಗೆ ಸುಲಭವಾಗಿ ಹೇಗೆ ಸೇರಬೇಕು ಮತ್ತು ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿಲ್ಲ.
ಫಾರ್ಮರ್ ಪ್ರಡ್ಯೂಸರ್ ಆರ್ಗನೈಜೇಷನ್ ಯೋಜನೆಯಡಿ 15 ಲಕ್ಷ ರೂ.ಗಳನ್ನು ಪಡೆಯಲು 11 ರೈತರು ಸೇರಿ ಸಂಘಟನೆಯನ್ನು ರಚಿಸಬೇಕಾಗಿದೆ. ಇದನ್ನು ಕಂಪನಿಗಳ ಕಾಯ್ದೆಯಡಿ ನೋಂದಾಯಿಸಬೇಕು. ನಂತರ ಅದು ಬೀಜಗಳು, ಔಷಧಿಗಳು, ರಸಗೊಬ್ಬರಗಳು ಮತ್ತು ಇತರ ಉಪಕರಣಗಳನ್ನು ರೈತರಿಗೆ ಮಾರಬಹುದು.
2023-24ರ ವೇಳೆಗೆ 10,000 ಎಫ್‌ಪಿಓಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಆಶಿಸಿದ್ದು, ಐದು ವರ್ಷಗಳ ಕಾಲ ಸರ್ಕಾರ ನೆರವು ನೀಡಲಿದೆ. ಪ್ರತಿ ಎಫ್‌ಪಿಒಗೆ ಮೋದಿ ಸರ್ಕಾರ 15 ಲಕ್ಷ ರೂ. ಸಾಲ ನೀಡುತ್ತದೆ. ಇದರ ಸಹಾಯದಿಂದ ಸಂಸ್ಥೆಯನ್ನು ಸ್ಥಾಪಿಸಿ ಕೆಲಸ ಮಾಡಲು ಪ್ರಾರಂಭಿಸಬಹುದು.