ಮುಂಬೈ: ಬಾಲಿವುಡ್ ನ ಖ್ಯಾತ ನಟ, ಮಿಸ್ಟರ್ ಫರ್ಪೆಕ್ಟ್ ಖ್ಯಾತರಾದ ಅಮೀರ್ ಖಾನ್ ತನ್ನ ಪತ್ನಿ ಕಿರಣ್ ರಾವ್‌ಗೆ ವಿಚ್ಚೇದನ ನೀಡಿದ್ದಾರೆ.
2005ರಲ್ಲಿ ಬೆಂಗಳೂರು ಮೂಲದ ಕಿರಣ್ ರಾವ್ ಅವರನ್ನು ಅಮೀರ್ ಖಾನ್ ಪ್ರೀತಿಸಿ ಮದುವೆಯಾಗಿದ್ದರು. ಅಮೀರ್ ಖಾನ್ ಅವರಿಗೆ ಇದು 2ನೇ ಮದುವೆಯಾಗಿದ್ದು, ಅಜಾದ್ ಎಂಬ ಒಬ್ಬ ಮಗನಿದ್ದಾನೆ. ಇದೀಗ ಮದುವೆಯ 15 ವರ್ಷಗಳ ಬಳಿಕ ಪತ್ನಿಗೆ ವಿಚ್ಚೇದನ ನೀಡಿದ್ದು, ಈ ಬಗ್ಗೆ ಪತ್ನಿ ಕಿರಣ್ ರಾವ್ ಮಾಹಿತಿ ನೀಡಿದ್ದಾರೆ.
‘ಈ 15 ಸುಂದರ ವರ್ಷಗಳಲ್ಲಿ ನಾವು ಸಂತೋಷ ಮತ್ತು ನಗುವನ್ನು ಹಂಚಿಕೊಂಡಿದ್ದೇವೆ, ನಮ್ಮ ಸಂಬಂಧವು ನಂಬಿಕೆ, ಗೌರವ ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸಿದ್ದು, ಇನ್ನು ಮುಂದೆ ನಾವಿಬ್ಬರು ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಬದಲಾಗಿ ಪರಸ್ಪರ ಸಹ-ಪೋಷಕರು ಮತ್ತು ಕುಟುಂಬವಾಗಿ ಜೀವನ ಆರಂಭಿಸುತ್ತೇವೆ’ ಎಂದು ಪತ್ನಿ ಕಿರಣ್ ರಾವ್ ಹೇಳಿದ್ದಾರೆ.