Google Pay : ಗೂಗಲ್ ಪೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಅಪ್ಲಿಕೇಶನ್‌ನ ಸಹಾಯದಿಂದ ನೇರವಾಗಿ 1 ಲಕ್ಷದವರೆಗಿನ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಬಹುದು.
ಈ ವಿಧಾನವು ಬಳಕೆದಾರರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡದೆಯೇ ಸಾಧ್ಯವಾದಷ್ಟು ಬೇಗ ಸಾಲ ಪಡೆಯಲು ಸುಲಭವಾದ ಪ್ರಕ್ರಿಯೆಯಾಗಿದೆ. Google Pay ಬಳಕೆದಾರರು 2024ರ ವೇಳೆಗೆ 1 ಲಕ್ಷದವರೆಗಿನ ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ದಾಖಲೆಗಳು ಅಥವಾ ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ.
ಇದನ್ನೂ ಓದಿ: ಇಂದು ಧನಿಷ್ಠಾ ನಕ್ಷತ್ರ; ಇಲ್ಲಿದೆ ಶುಭ ಮುಹೂರ್ತ, ಅಶುಭ ಮುಹೂರ್ತದ ಮಾಹಿತಿ!
Google Pay ಸಾಲಕ್ಕೆ ಈ ದಾಖಲೆಗಳು ಕಡ್ಡಾಯ
ಗೂಗಲ್ ಪೇ ಲೋನ್ ಪ್ರಕ್ರಿಯೆ ತುಂಬಾ ಸುಲಭ ಹಾಗೂ ಕಡಿಮೆ ದಾಖಲೆಗಳ ಅಗತ್ಯವಿರುತ್ತದೆ. ಅರ್ಜಿದಾರರಿಗೆ ತಮ್ಮ ಆಧಾರ್ ಮಾಹಿತಿ, ಪಾನ್ ಮಾಹಿತಿ, IFSC ಕೋಡ್‌ನೊಂದಿಗೆ ಬ್ಯಾಂಕ್ ಖಾತೆ ಮಾಹಿತಿ ಜೊತೆ ಗೂಗಲ್ ಪೇ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಅಗತ್ಯವಿದೆ.
ಬಳಕೆದಾರರು ತಮ್ಮ ವಹಿವಾಟಿನ ಇತಿಹಾಸ & ಕ್ರೆಡಿಟ್ ಸ್ಕೋರ್ ಅನ್ನು ನೇರವಾಗಿ ಅಪ್ಲಿಕೇಶನ್‌ನಲ್ಲಿ ಆಧರಿಸಿ ಸಾಲ ನೀಡಲಾಗುತ್ತದೆ. IDFC ಫಸ್ಟ್ ಬ್ಯಾಂಕ್ & ಫೆಡರಲ್ ಬ್ಯಾಂಕ್‌ನಂತಹ ಪಾಲುದಾರ ಬ್ಯಾಂಕ್‌ಗಳು ಹಣ ಒದಗಿಸುತ್ತವೆ.
ಇದನ್ನೂ ಓದಿ : ಇಂದು ಕನ್ಯಾ ಸಂಕ್ರಾಂತಿಯಂದು ಸಿಂಹ, ತುಲಾ ಸೇರಿದಂತೆ ಈ ರಾಶಿಯವರಿಗೆ ಆರ್ಥಿಕ ಲಾಭ..!