ತುರ್ತು ಮಿಲಿಟರಿ ಆಡಳಿತ ಘೋಷಿಸಿ 6 ಗಂಟೆಗಳಲ್ಲೇ ಹಿಂಪಡೆದ South Korea ಅಧ್ಯಕ್ಷ

ಸಿಯೋಲ್‌: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ದೇಶದಲ್ಲಿ ಹೊರಡಿಸಿದ್ದ ತುರ್ತು ಮಿಲಿಟರಿ ಆಡಳಿತವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದಿದ್ದಾರೆ. ವಿಪಕ್ಷಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂದು ಆರೋಪಿಸಿ ದಕ್ಷಿಣ ಕೊರಿಯಾದ ಅಧ್ಯಕ್ಷ…

ಸಿಯೋಲ್‌: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ದೇಶದಲ್ಲಿ ಹೊರಡಿಸಿದ್ದ ತುರ್ತು ಮಿಲಿಟರಿ ಆಡಳಿತವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದಿದ್ದಾರೆ.

ವಿಪಕ್ಷಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂದು ಆರೋಪಿಸಿ ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್-ಯೋಲ್ ಮಂಗಳವಾರ ರಾತ್ರಿ ಈ ಆಘಾತಕಾರಿ ಘೋಷಣೆ ಮಾಡಿದ್ದರು. ದೇಶದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಮಿಲಿಟರಿ ಆಡಳಿತವನ್ನು ಘೋಷಿಸಲಾಗಿತ್ತು. ಅಧ್ಯಕ್ಷ ಯುನ್ ಸುಕ್-ಯೋಲ್ ಅವರ ಘೋಷಣೆಯ ನಂತರ, ದಕ್ಷಿಣ ಕೊರಿಯಾದ ಶಾಸಕರು ಸಮರ ಕಾನೂನನ್ನು ಬಲವಾಗಿ ವಿರೋಧಿಸಿದರು.

ಅಧ್ಯಕ್ಷರ ನಿರ್ಧಾರವನ್ನು ಖಂಡಿಸಲು ರಾಷ್ಟ್ರೀಯ ಅಸೆಂಬ್ಲಿಯ ಮಧ್ಯರಾತ್ರಿಯ ಅಧಿವೇಶನದಲ್ಲಿ ಅವರು ಸಮರ ಕಾನೂನನ್ನು ಹೇರುವುದರ ವಿರುದ್ಧ ಸರ್ವಾನುಮತದಿಂದ ಮತ ಚಲಾಯಿಸಿದರು. ಸೇನಾಡಳಿತದ ಮೂಲಕ ಮುಕ್ತ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಮರು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

Vijayaprabha Mobile App free

ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳಿಂದ ಎದುರಾಗಿರುವ ಬೆದರಿಕೆಯಿಂದ ಸ್ವತಂತ್ರ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ದೇಶ ವಿರೋಧಿ ಶಕ್ತಿಗಳನ್ನು ನಿವಾರಿಸಲು ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು.

ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿತ್ತು. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆರೇ ಗಂಟೆಗಳಲ್ಲಿ ನಿರ್ಣಯ ಬದಲಾಗಿದೆ.

ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ಎಮರ್ಜೆನ್ಸಿ ಘೋಷಿಸುತ್ತಿದ್ದೇವೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ಹೇಳಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.