World Dog Day: ಶ್ವಾನಗಳು ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಎಂದೇ ಖ್ಯಾತಿ ಪಡೆದಿದ್ದು, ವಿಶ್ವ ಶ್ವಾನ ದಿನವನ್ನು (World Dog Day) ಆಗಸ್ಟ್ 26 ರಂದು ಆಚರಿಸಲಾಗುತ್ತಿದೆ
ಹೌದು, ಮನುಷ್ಯರಿಗಿಂತ ಹೆಚ್ಚಾಗಿ ಭಾವನೆಗಳಿಗೆ ಸ್ಪಂದಿಸುವ ಅವುಗಳು ಮನುಷ್ಯನ ಉತ್ತಮ ಸ್ನೇಹಿತ ಕೂಡ ಹೌದು. ಇತ್ತೀಚೆಗೆ ವಿದೇಶಿ ತಳಿಯ ನಾಯಿಗಳನ್ನು ಸಾಕುವುದು ಹೆಚ್ಚಾಗಿದ್ದು ಸ್ಥಳೀಯ ಜಾತಿಯ ನಾಯಿಗಳನ್ನು ಸಾಕಲು ಯಾರು ಇಷ್ಟಪಡುತ್ತಿಲ್ಲ. ಈ ಕಾರಣಕ್ಕಾಗಿ ಜನರಿಗೆ ಅರಿವು ಮೂಡಿಸಲು ಹಾಗೂ ನಾಯಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸಲು ಪ್ರತಿ ವರ್ಷ ಆಗಸ್ಟ್ 26 ರಂದು ವಿಶ್ವ ಶ್ವಾನ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಶ್ವಾನ ದಿನವನ್ನು ಆಗಸ್ಟ್ 26 ರಂದೇ ಏಕೆ ಆಚರಿಸಲಾಗುತ್ತಿದೆ?
2004 ರಲ್ಲಿ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ಮತ್ತು ಲೇಖಕಿ ಕೋಲಿನ್ ಪೈಜ್ ಅವರು ಅಂತರಾಷ್ಟ್ರೀಯ ಶ್ವಾನ ದಿನವನ್ನು ಸ್ಥಾಪಿಸಿದರು. ಪೈಜ್ ಅವರು ಹತ್ತು ವರ್ಷ ಪ್ರಾಯದವರಾಗಿದ್ದಾಗ, ಅವರ ಕುಟುಂಬವು ಆಗಸ್ಟ್ 26 ರಂದು ಶೆಲ್ಟಿ ಎಂಬ ನಾಯಿಯನ್ನು ದತ್ತು ಪಡೆದರು.
ಈ ದಿನದ ನೆನಪಿಗಾಗಿ, ಅವರು ಇದೇ ದಿನವನ್ನು ಅಂತರಾಷ್ಟ್ರೀಯ ಶ್ವಾನ ದಿನವಾಗಿ ಆಯ್ಕೆ ಮಾಡಿದರು. ಮಾತ್ರವಲ್ಲದೆ ಪ್ರಾಣಿಗಳನ್ನು ದತ್ತು ಪಡೆಯಲು ಜನರನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ನಾಯಿಮರಿ ದಿನದ ಆಚರಣೆಯನ್ನು ಕೂಡಾ ಸ್ಥಾಪಿಸಿದ್ದಾರೆ.
World Dog Day: ಶ್ವಾನಗಳ ಕುರಿತು ಈ ಆಸಕ್ತಿದಾಯಕ ಸಂಗತಿಗಳು ತಿಳಿದಿದೆಯೇ?
- ಪ್ರಪಂಚದಲ್ಲಿ 340ಕ್ಕೂ ಹೆಚ್ಚು ನಾಯಿ ಜಾತಿಗಳು ಇವೆ. ನಾಯಿಗಳು 40,000 Hz ವರೆಗೆ ಧ್ವನಿಗಳನ್ನು ಕೇಳಬಲ್ಲವು.
- ದಿನಕ್ಕೆ ಸರಾಸರಿ 12-14 ಗಂಟೆಗಳವರೆಗೆ ನಾಯಿಗಳು ನಿದ್ರೆ ಮಾಡುತ್ತವೆ.
- ಇವುಗಳ ಹೃದಯವು ಪ್ರತಿ ನಿಮಿಷಕ್ಕೆ 60 ರಿಂದ 140 ಬಾರಿ ಹೊಡೆಯುತ್ತದೆ.
- ನಾಯಿಗಳು ಮಾನವರೊಂದಿಗೆ15,000 ವರ್ಷಗಳಿಗೂ ಹೆಚ್ಚು ಕಾಲ ಸ್ನೇಹ ಹೊಂದಿವೆ.
- ನಾಯಿಗಳ ಮೂಗು ಮಾನವರಿಗಿಂತ 10,000-100,000 ಪಟ್ಟು ಹೆಚ್ಚು ಶಕ್ತಿಯುತವಾಗಿದೆ.
- ಸುಮಾರು 250 ಶಬ್ದಗಳನ್ನು ಮತ್ತು ಸಂಜ್ಞೆಗಳನ್ನು ನಾಯಿಗಳು ಅರ್ಥಮಾಡಿಕೊಳ್ಳಬಲ್ಲವು
ವಿಶ್ವ ಶ್ವಾನ ದಿನವನ್ನು ಈ ರೀತಿಯಾಗಿ ಆಚರಿಸಿ
ವಿಶ್ವ ಶ್ವಾನ ದಿನವನ್ನು ಆಚರಿಸಲು ಮನೆಯಲ್ಲಿ ಸಾಕಿರುವ ಶ್ವಾನಕ್ಕಾಗಿ ಈ ದಿನವನ್ನು ಮೀಸಲಿಡಿ. ಹೆಚ್ಚು ಸಂತೋಷವಾಗಿರುವಂತೆ ಮೂಕ ಪ್ರಾಣಿಗಳನ್ನು ನೋಡಿಕೊಳ್ಳಿ. ಈ ದಿನವನ್ನು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕವೂ ಆಚರಿಸಬಹುದು.
ಜೊತೆಗೆ ನಿಂದನೆ ಮತ್ತು ನಿರ್ಲಕ್ಷ್ಯಕ್ಕೊಳಗದ ನಾಯಿಗಳನ್ನು ರಕ್ಷಿಸುವುದು, ಶ್ವಾನಗಳ ಮಿಶ್ರ ತಳಿಗಳನ್ನು ಸೃಷ್ಟಿಸುವ ಕಾರ್ಖಾನೆಗಳನ್ನು ನಿಷೇಧಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಬಹುದು. ಪ್ರಾಣಿ ದಯಾ ಸಂಘಟನೆಗಳಿಗೆ ದೇಣಿಗೆ ನೀಡುವ ಮೂಲಕವೂ ಅರ್ಥಪೂರ್ಣವಾಗಿ ಆಚರಿಸಬಹುದು.
https://vijayaprabha.com/actor-darshan-bed-photo-viral/