Crop insurance: ಬೆಳೆ ವಿಮೆ ಪರಿಹಾರ (Crop insurance settlement) ಎಂದರೆ ರೈತರು ಬೆಳೆ ಹಾನಿ (Crop damage) ಅಥವಾ ನಷ್ಟವನ್ನು ಅನುಭವಿಸಿದಾಗ ವಿಮಾ ಕಂಪನಿಯಿಂದ ನೀಡಲಾಗುವ ಪರಿಹಾರ.
ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದಾಗ, ಪ್ರಕೃತಿ ವಿಕೋಪಗಳು ಅಥವಾ ಇತರ ಕಾರಣಗಳಿಂದ ಬೆಳೆ ನಷ್ಟವಾದರೆ, ವಿಮಾ ಕಂಪನಿಯ ಸಿಬ್ಬಂದಿಗಳು ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ವರದಿ ಕಳಿಸುತ್ತಾರೆ. ಆ ವರದಿ ಆಧಾರದ ಮೇಲೆ ರೈತರಿಗೆ ಪರಿಹಾರ ಹಣ ಪಾವತಿಸಲಾಗುತ್ತದೆ. ಇದು ರೈತರಿಗೆ ಬೆಳೆ ನಷ್ಟದಿಂದ ಉಂಟಾಗುವ ಆರ್ಥಿಕ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಬೆಳೆ ವಿಮೆ ಮಾಡಿಸಿದ ನಂತರ ವಿಮೆ ಜಮೆಯಾಗಲು ರೈತರು ಏನು ಮಾಡಬೇಕು?
ವಿಮೆ ಮಾಡಿಸಿದ ನಂತರ ರೈತರು ಯಾವ ವಿಮಾ ಕಂಪನಿಗೆ ಕಟ್ಟಿರುತ್ತಾರೆ. ತಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ. ಆ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಅನ್ನು ತಿಳಿದುಕೊಳ್ಳಲೇಬೇಕು.
ಏಕೆಂದರೆ ಬೆಳೆಯು ಪ್ರಾಕೃತಿಕ ವಿಕೋಪದಿಂದಾಗಿ ಹಾಳಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ. ಆಗ ವಿಮಾ ಕಂಪನಿಯ ಹಣ ಜಮೆಯಾಗುತ್ತದೆ. ವಿಮಾ ಕಂಪನಿಗಳನ್ನು ಸಂಪರ್ಕಿಸಾಲು ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ 1800 200 5142 ಕರೆ ಮಾಡಿ.
https://vijayaprabha.com/highest-taxe-paid-celebrities-fy224/