Highest tax paid celebrities: 2024ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯನ್ನು ಫಾರ್ಚೂನ್ ಇಂಡಿಯಾ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ.
ಹೌದು,ನಟ ಶಾರುಖ್ ಖಾನ್ (₹92 ಕೋಟಿ) ಅಗ್ರಸ್ಥಾನದಲ್ಲಿದ್ದಾರೆ. ನಟ ವಿಜಯ್ (₹80 ಕೋಟಿ) ಎರಡನೇ ಹಾಗೂ ಸಲ್ಮಾನ್ ಖಾನ್ (₹75 ಕೋಟಿ) ಮೂರನೇ ಸ್ಥಾನದಲ್ಲಿದ್ದಾರೆ. ಅಮಿತಾಬ್ ಬಚ್ಚನ್ (₹71 ಕೋಟಿ) ಮತ್ತು ಅಜಯ್ ದೇವಗನ್ (₹42 ಕೋಟಿ) ಕೂಡ ಇದ್ದಾರೆ.
FY24ರಲ್ಲಿ ಯಾವ ಕ್ರಿಕೆಟಿಗರು ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ?
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ FY24 ರಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಕ್ರಿಕೆಟಿಗ (ಮಾಜಿ ಅಥವಾ ಪ್ರಸ್ತುತ). ಫಾರ್ಚೂನ್ ಇಂಡಿಯಾ ಪಟ್ಟಿಯ ಪ್ರಕಾರ ಅವರು FY24 ರಲ್ಲಿ ₹66 ಕೋಟಿ ಮೊತ್ತವನ್ನು ಪಾವತಿಸಿದ್ದಾರೆ.
ಕೊಹ್ಲಿ ನಂತರದ ಸ್ಥಾನದಲ್ಲಿರುವ ಎಂ.ಎಸ್ ಧೋನಿ (₹38 ಕೋಟಿ), ಸಚಿನ್ ತೆಂಡೂಲ್ಕರ್ (₹28 ಕೋಟಿ), ಸೌರವ್ ಗಂಗೂಲಿ (₹23 ಕೋಟಿ) ಮತ್ತು ಹಾರ್ದಿಕ್ ಪಾಂಡ್ಯ (₹13 ಕೋಟಿ) ತೆರಿಗೆ ಪಾವತಿಸಿದ್ದಾರೆ.
https://vijayaprabha.com/heavy-rain-today-in-these-districts-yellow-alert-announced/