AI technology: ಏನಿದು ಎಐ ತಂತ್ರಜ್ಞಾನ? ಮಿತಿಮೀರಿದ ಎಐ ಬಳಕೆ ಅಪಾಯವೇ?

AI technology: ಎಐ ಎಂದರೆ ನಮ್ಮಂತೆಯೇ ಯೋಚಿಸಲು ಮತ್ತು ಕಾರ್ಯನಿರ್ವಹಿಸಲು ಪ್ರೋಗ್ರಾಮ್ ಮಾಡಲಾದ ಯಂತ್ರಗಳಲ್ಲಿ ಮಾನವ ಬುದ್ಧಿಮತ್ತೆಯ ಸಿಮ್ಯುಲೇಶನ್ ಆಗಿದೆ. ಇದು ದೃಶ್ಯ ಗ್ರಹಿಕೆ, ಮಾತಿನ ಗುರುತಿಸುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಭಾಷಾ ಅನುವಾದದಂತಹ…

AI Technology

AI technology: ಎಐ ಎಂದರೆ ನಮ್ಮಂತೆಯೇ ಯೋಚಿಸಲು ಮತ್ತು ಕಾರ್ಯನಿರ್ವಹಿಸಲು ಪ್ರೋಗ್ರಾಮ್ ಮಾಡಲಾದ ಯಂತ್ರಗಳಲ್ಲಿ ಮಾನವ ಬುದ್ಧಿಮತ್ತೆಯ ಸಿಮ್ಯುಲೇಶನ್ ಆಗಿದೆ. ಇದು ದೃಶ್ಯ ಗ್ರಹಿಕೆ, ಮಾತಿನ ಗುರುತಿಸುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಭಾಷಾ ಅನುವಾದದಂತಹ ಅನೇಕ ಕೆಲಸಗಳನ್ನು ವೇಗವಾಗಿ ಮಾಡುತ್ತದೆ.

ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸಬಲ್ಲ ಕ್ರಮಾವಳಿಗಳು ಮತ್ತು ಕಂಪ್ಯೂಟರ್ ಪ್ರೋಗ್ರಾಂಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಜೊತೆಗೆ ಎಐ ಅನೇಕ ಉದ್ಯಮಗಳಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ.

ಮಿತಿಮೀರಿದ ಎಐ ಬಳಕೆ ಅಪಾಯವೇ?

AI ಎನ್ನುವುದು ಕೃತಕ ಬುದ್ಧಿಮತ್ತೆಯ ಒಂದು ವಿಧವಾಗಿದ್ದು ಅದು ಕಚ್ಚಾ ಡೇಟಾದ ಆಧಾರದ ಮೇಲೆ ಪಠ್ಯ, ವೀಡಿಯೊ, ಆಡಿಯೋ ಅಥವಾ ಚಿತ್ರಗಳ ರೂಪದಲ್ಲಿ ಪ್ರಾಂಪ್ಟ್ ಔಟ್‌ಪುಟ್ ಅನ್ನು ಬದಲು ಮಾಡುವ ಪ್ರಕ್ರೀಯೇಯಾಗಿದೆ. ನೂರು ಮನುಷ್ಯರು ಒಂದು ಗಂಟೆ ಮಾಡುವ ಕೆಲಸವನ್ನು ಕೃತಕ ಬುದ್ಧಿಮತ್ತೆ ಯಂತ್ರ ವೇಗವಾಗಿ ಮಾಡಿಬಿಡುತ್ತದೆ.

Vijayaprabha Mobile App free

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇದರ ಬಳಕೆ ಚಾಲ್ತಿಗೆ ಬಂದುಬಿಟ್ಟಿದೆ. ಆದ್ರೆ ಮಿತಿ ಮೀರಿದ ಎಐ ಬಳಕೆಯು ಮುಂದೆ ವಿಶ್ವಕ್ಕೆ ಅಪಾಯ ತಂದೊಡ್ಡಬಹುದೇ ಎನ್ನುವ ಆಂತಕ ಈಗ ತಂತ್ರಜ್ಞರಲ್ಲೇ ಹುಟ್ಟಿಕೊಂಡಿದೆ.

ಮಿತಿಮೀರಿಸ ಎಐ ತಂತ್ರಜ್ಞಾನದ ಬಳಕೆಯಿಂದ ಸೈಬರ್ ವಾರ್‌ ಆತಂಕ!

ನಮ್ಮ ವಿಶ್ವ ಅನೇಕ ರೀತಿಯ ಯುದ್ಧ ಗಳನ್ನು ನೋಡಿದೆ. ಆದರೆ ಎಐ ತಂತ್ರಜ್ಞಾನ ಬಂದ ನಂತರ ಸೈಬರ್‌ ವಾರ್‌ ಸವಾಲುಗಳನ್ನು ಎದುರಿಸಬೇಕಿದೆ. ಮಿತಿಮೀರಿದ ಎಐ ಬಳಕೆಗಳು ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಎಐ ಮಾದರಿಗಳು ವೈದ್ಯಲೋಕಕ್ಕೆ ಪೂರಕ ಮಾಹಿತಿಗಳನ್ನು ಒದಗಿಸುವುರಿಂದ ಕಿಡಿಗೇಡಿಗಳು ವೈರಸ್‌ಗಳನ್ನು ಸೃಷ್ಟಿಸಬಹುದು. ದೊಡ್ಡಮಟ್ಟದ ಸೈಬರ್‌ ದಾಳಿಗಳನ್ನು ನಡೆಸಬಹುದು.

ಎಐ ತಂತ್ರಜ್ಞಾನ್ನು ಸರಿಯಾಗಿ ಬಳಸಿಕೊಂಡರೆ ಸಮಯದ ಉಳಿತಾಯ ಸಾಧ್ಯ!

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡಿದ್ದರಿಂದ ಕೆಲಸ ವೇಗವಾಗಿ ನಡೆದು ಸಮಯ ಉಳಿತಾಯವಾಗುತ್ತದೆ ಎಂದು ಶೇ 94ರಷ್ಟು ಭಾರತೀಯ ಸೇವಾ ವಲಯದ ವೃತ್ತಿಪರರು ಹೇಳಿದ್ದಾರೆ. ಪ್ರಖ್ಯಾತ ಕಂಪನಿ ಸೇಲ್ಸ್​ಫೋರ್ಸ್ ವರದಿಯ ಪ್ರಕಾರ ಸುಮಾರು ಶೇಕಡಾ 89ರಷ್ಟು ಸೇವಾ ವೃತ್ತಿಪರರು ಎಐ ತಂತ್ರಜ್ಞಾನವು ಕಂಪನಿಯ ವೆಚ್ಚ ಕಡಿಮೆ ಮಾಡಲು ಸಹಾಯಯಕವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ದೇಶದ ಶೇಕಡಾ 93 ರಷ್ಟು ಸೇವಾ ಸಂಸ್ಥೆಗಳು ಈ ವರ್ಷ ಎಐನ ಮೇಲೆ ಬಂಡವಾಳ ಹೂಡಿಕೆ ಹೆಚ್ಚಿಸಲು ಯೋಜಿಸುತ್ತಿವೆ ಎಂದು ವರದಿ ತಿಳಿಸಿದೆ.

https://vijayaprabha.com/ashwini-puneet-rajkumar-fake-porn-video-viral/#google_vignette

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.