“ಸುದೀಪ್ ಸರ್ ಹುಟ್ಟುಹಬ್ಬದ ದಿನ ಮತ್ತೆ ಭೇಟಿ ಆಗೋಣ! Be Ready Boys” ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ ರೋಣ ಚಿತ್ರ ಬಂದು ಎರಡು ವರ್ಷಗಳಾಗಿವೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ (Kichcha Sudeepa) ಅವರು ಪ್ರಮುಖ ಪಾತ್ರದಲ್ಲಿದ್ದರು. ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ (Anup Bhandari)…

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ ರೋಣ ಚಿತ್ರ ಬಂದು ಎರಡು ವರ್ಷಗಳಾಗಿವೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ (Kichcha Sudeepa) ಅವರು ಪ್ರಮುಖ ಪಾತ್ರದಲ್ಲಿದ್ದರು. ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಸಂಯೋಜನೆಯಲ್ಲಿ ಮೂಡಿಬಂದಿದ್ದ ವಿಕ್ರಾಂತ್ ರೋಣ ದೊಡ್ಡ ಮಟ್ಟಿಗಿನ ಯಶಸ್ಸು ಅನ್ನು ತಂದು ಕೊಟ್ಟಿತ್ತು ಮತ್ತು ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗಲಿದ್ದು ನ್ಯೂ ಅಪ್‌ಡೇಟ್‌ ನೀಡಲು ಸಜ್ಜಾಗಿ ನಿಂತಿದೆ.

ಕಿಚ್ಚನ ಮುಂದಿನ ಸಿನಿಮಾ ಯಾವುದೆಂದು ಕಾದು ಕುಳಿತಿರುವ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಗುವ ಕಾಲ ಹತ್ತಿರ ಬಂದಿದೆ. ಹೊಸ ಚಿತ್ರದ ಹೆಸರೇನೆಂದು ಇನ್ನೂ ಬಹಿರಂಗಪಡಿಸಲಿಲ್ಲ. ಆದರೆ ಕಿಚ್ಚನ ಜತೆ ಇನ್ನೊಂದು ಚಿತ್ರವನ್ನು ಮಾಡುತ್ತಿದ್ದೆನೆ ಎಂದು ಅನೂಪ್‌ ಬರೆದು ಕೊಂಡಿದ್ದಾರೆ. ಮತ್ತು ಇವೆಲ್ಲದರ ಪ್ರಶ್ನೆಗೆ ಸೆಪ್ಟೆಂಬರ್ 2 ಸುದೀಪ್‌ ಅವರ ಜನುಮ ದಿನದಂದು ಫ್ಯಾನ್ಸ್‌ಗೆ ಭರ್ಜರಿ ಗುಡ್ ನ್ಯೂಸ್ ನೀಡಲಿದ್ದಾರೆ.

“ಸುದೀಪ್ ಸರ್ ಹುಟ್ಟುಹಬ್ಬದ ದಿನ ಮತ್ತೆ ಭೇಟಿ ಆಗೋಣ! Be Ready Boys” ಎಂದು ಕ್ಯಾಪ್ಶನ್‌ ನೀಡುವ ಮೂಲಕ, ಅನೂಪ್ ತಮ್ಮ ಮತ್ತು ಸದೀಪ್‌ ಜತೆಗಿನ ಫೋಟೊವನ್ನು ಸೊಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 2ರಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದ್ದು, ಅತಿ ಶೀಘ್ರದಲ್ಲಿಯೇ ರಿಲೀಸ್‌ ಸಹ ರಿವಿಲ್‌ ಮಾಡಬಹುದಾಗಿದೆ.

Vijayaprabha Mobile App free

ಇನ್ನು ಈಗಾಗಲೇ ರಿಲೀಸ್‌ ಮಾಡಿರುವ ಫೋಟೊದಲ್ಲಿ ಇಬ್ಬರು ಬ್ಲ್ಯಾಕ್‌ ಡ್ರೆಸ್‌ ವೇರ್‌ ಮಾಡಿದ್ದು, ಇದಕ್ಕೆ ಕ್ಯಾಪಶನ್‌ ಸಹ ಕೊಟ್ಟಿದ್ದಾರೆ. ದಿ ಮೆನ್‌ ಇನ್‌ ಬ್ಲ್ಯಾಕ್‌ ವೆಲ್‌ ಬಿ ರೈಟ್‌ ಬ್ಯಾಕ್‌ ಎಂದು ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.