ಮೋದಿ ಸರ್ಕಾರದಿಂದ ರೈತರಿಗೆ ಬಿಗ್ ಗಿಫ್ಟ್; 7 ಪ್ರಮುಖ ಕೃಷಿ ಯೋಜನೆಗಳಿಗೆ ಅನುಮತಿ

Agriculture projects: ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತು ದೇಶಾದ್ಯಂತ ಆಹಾರ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ರೈತರಿಗೆ ಸಂಬಂಧಿಸಿದ 7 ಯೋಜನೆಗಳಿಗೆ ಅನುಮೋದನೆ ನೀಡಿದೆ. ಹೌದು, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ…

Agriculture projects

Agriculture projects: ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತು ದೇಶಾದ್ಯಂತ ಆಹಾರ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ರೈತರಿಗೆ ಸಂಬಂಧಿಸಿದ 7 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಹೌದು, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಈ 7 ಕಾರ್ಯಕ್ರಮಗಳಿಗೆ ಸುಮಾರು 14,000 ಕೋಟಿ ರೂ. ಘೋಷಿಸಲಾಗಿದೆ. ಹೊಸ ಕಾರ್ಯಕ್ರಮ ಡಿಜಿಟಲ್ ಕೃಷಿ ಮಿಷನ್ ಜಾರಿಯಾಗಲಿದ್ದು, ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಸಿದ್ಧಪಡಿಸಲಾಗುತ್ತದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್‌ಗೆ 2817 ಕೋಟಿ ರೂ. ಹೂಡಿಕೆಯೊಂದಿಗೆ ಸಿದ್ಧಪಡಿಸಲಾಗುತ್ತಿದೆ.

14,000 ಕೋಟಿ ರೂ ಮೊತ್ತದ 7 ಪ್ರಮುಖ ಕೃಷಿ ಯೋಜನೆಗಳಿಗೆ ಸಂಪುಟ ಅನುಮತಿ. ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು 13,966 ಕೋಟಿ ರೂ. ಮೊತ್ತದ 7 ಪ್ರಮುಖ ಕೃಷಿ ಯೋಜನೆಗಳಿಗೆ ಕೇಂದ್ರ ಸಂಪುಟ  ಅನುಮೋದನೆ ನೀಡಿದೆ.

Vijayaprabha Mobile App free
  • ಆಹಾರ ಮತ್ತು ಪೌಷ್ಟಿಕ ಭದ್ರತೆಗೆ ಬೆಳೆ ವಿಜ್ಞಾನ: 3,979 ಕೋಟಿ ರೂ.
  • ಕೃಷಿ ಶಿಕ್ಷಣ ಮತ್ತು ನಿರ್ವಹಣೆಗೆ 2,291 ಕೋಟಿ ರೂ.
  • ಡಿಜಿಟಲ್ ಅಗ್ರಿಕಲ್ಚರ್ ಮಿಷನ್​ಗೆ 2,817 ಕೋಟಿ ರೂ.
  • ಜಾನುವಾರು ಆರೋಗ್ಯ ಮತ್ತು ಉತ್ಪನ್ನತೆ: 1,702 ಕೋಟಿ ರೂ.
  • ತೋಟಗಾರಿಕೆ ಅಭಿವೃದ್ಧಿಗೆ 860 ಕೋಟಿ ರೂ.
  • ಕೃಷಿ ವಿಜ್ಞಾನ ಕೇಂದ್ರಕ್ಕೆ 1,202 ಕೋಟಿ ರೂ.
  • ನೈಸರ್ಗಿ ಸಂಪನ್ಮೂಲ ನಿರ್ವಹಣೆಗೆ 1,202 ಕೋಟಿ ರೂ.

https://vijayaprabha.com/%e0%b2%85%e0%b2%aa%e0%b3%8d%e0%b2%aa%e0%b2%bf%e0%b2%a4%e0%b2%aa%e0%b3%8d%e0%b2%aa%e0%b2%bf%e0%b2%af%e0%b3%82-%e0%b2%88-%e0%b2%86%e0%b3%8d%e0%b2%af%e0%b2%aa%e0%b3%8d-%e0%b2%87%e0%b2%a8/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.